ನವದೆಹಲಿ: ಅಮೆರಿಕಾದ ಬಹುರಾಷ್ಟ್ರೀಯ ಕೊರಿಯರ್ ಡೆಲಿವರಿ ಸಂಸ್ಥೆ FedEx ನ ಅಧ್ಯಕ್ಷ ಮತ್ತು ಕಾರ್ಯನಿರ್ವಾಹಕ ಅಧಿಕಾರಿಯಾಗಿ ಭಾರತೀಯ ಸಂಜಾತ ರಾಜೇಶ್ ಸುಬ್ರಹ್ಮಣಿಯಮ್ ಅವರನ್ನು ನೇಮಕ ಮಾಡಲಾಗಿದೆ.
ಪ್ರಸ್ತುತ ರಾಜೇಶ್ ಸುಬ್ರಹ್ಮಣಿಯನ್ ಅವರು FedEx ಕಾರ್ಪೋರೇಶನ್ನ ಉಪಾಧ್ಯಕ್ಷ, ಮಾರ್ಕೆಟಿಂಗ್ ಮುಖ್ಯಸ್ಥ, ಕಮ್ಯೂನಿಕೇಶನ್ ಆಫೀಸರ್ ಆಗಿ ಕಾರ್ಯನಿರ್ವಹಿಸುತ್ತಿದ್ದಾರೆ. 2019ರ ಜನವರಿ 1ರಿಂದ ಅವರು ಅಧ್ಯಕ್ಷರಾಗಿ ಅಧಿಕಾರ ಸ್ವೀಕಾರ ಮಾಡಲಿದ್ದಾರೆ.
ತಿರುವನಂತಪುರಂನವರಾದ ಸುಬ್ರಹ್ಮಣಿಯನ್ ಅವರು, ಐಐಟಿ-ಬಾಂಬೆ ಪದವೀಧರ. 27 ವರ್ಷಗಳಿಂದ FedEx ನಲ್ಲಿರುವ ಇವರು, ಹಲವಾರು ಉನ್ನತ ಹುದ್ದೆಗಳನ್ನು ನಿಭಾಯಿಸಿದ್ದಾರೆ.
ಅವರು ತಮ್ಮ ವೃತ್ತಿಜೀವನವನ್ನು ಮೆಂಫಿಸ್ ನಿಂದ ಪ್ರಾರಂಭಿಸಿದರು, ತರುವಾಯ ಹಾಂಗ್ ಕಾಂಗ್ ಗೆ ಸ್ಥಳಾಂತರಗೊಂಡರು, ಅಲ್ಲಿ ಅವರು ಏಷ್ಯಾ ಪೆಸಿಫಿಕ್ ವಲಯಕ್ಕೆ ಮಾರ್ಕೆಟಿಂಗ್ ಮತ್ತು ಗ್ರಾಹಕರ ಸೇವೆಯ ಉಸ್ತುವಾರಿಯನ್ನು ನೋಡಿಕೊಂಡರು.
source: hindustantimes.com
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.