ನವದೆಹಲಿ: ಕೆಲವೊಂದು ದೋಷಗಳನ್ನು ತಿದ್ದಿಕೊಂಡು ರೈಲು ಪ್ರಯಾಣವನ್ನು ಮತ್ತಷ್ಟು ಸುರಕ್ಷಿತಗೊಳಿಸುವತ್ತ ಭಾರತೀಯ ರೈಲ್ವೇ ಕಾರ್ಯೋನ್ಮುಖವಾಗಿದೆ. ಇದಕ್ಕಾಗಿ ಆರ್ಟಿಫೀಶಿಯಲ್ ಇಂಟೆಲಿಜೆನ್ಸ್ ಆಧಾರಿತ ರೋಬೋಟ್ ವ್ಯವಸ್ಥೆಯನ್ನು ಅಭಿವೃದ್ಧಿಪಡಿಸಿದೆ.
ಈ ರೋಬೋಟ್ ರೈಲಿನ ಅಂಡರ್ ಗೇರ್ನ ಫೋಟೋಗಳನ್ನು ಕ್ಲಿಕ್ಕಿಸುತ್ತದೆ, ವೀಡಿಯೋ ರೆಕಾರ್ಡ್ ಮಾಡುತ್ತದೆ ಮತ್ತು ಅದನ್ನು ಎಂಜಿನಿಯರ್ಗಳಿಗೆ ಕಳುಹಿಸಿಕೊಡುತ್ತದೆ. ಇದನ್ನು ಆಧರಿಸಿ ಎಂಜಿನಿಯರ್ಗಳು ನಿರ್ವಹಣೆ, ರಿಪೇರಿಗಳನ್ನು ಮಾಡುತ್ತಾರೆ.
ಸೆಂಟ್ರಲ್ ರೈಲ್ವೇ ನಾಗ್ಪುರ್ ಡಿವಿಶನ್ನ ಮೆಕ್ಯಾನಿಕಲ್ ಬ್ರಾಂಚ್ ಈ ರೋಬೋಟ್ನ್ನು ಅಭಿವೃದ್ಧಿಪಡಿಸಿದ್ದು, ಉಸ್ತಾದ್(ಅಂಡರ್ಗೇರ್ ಸರ್ವಿಲೆನ್ಸ್ ತ್ರೂ) ಎಂದು ಇದಕ್ಕೆ ಹೆರಿರಿಟ್ಟಿದೆ. ಸಮಯಕ್ಕೆ ಸರಿಯಾಗಿ ಇದು ಎಚ್ಡಿ ಕ್ಯಾಮೆರಾ ಮೂಲಕ ಕೋಚ್ಗಳ ಭಾಗಗಳನ್ನು ಪರಿಶೀಲನೆ ನಡೆಸುತ್ತದೆ ಮತ್ತು ವೈಫೈ ಮೂಲಕ ಇವುಗಳನ್ನು ವರ್ಗಾಯಿಸುತ್ತದೆ.
ಉಸ್ತಾದ್ನ ಸಹಾಯದಿಂದ, ಪರಿಶೀಲನೆ ನಡೆಸಲು ಅಸಾಧ್ಯ ಎನಿಸಿರುವ ರೈಲಿನ ಅಂಡರ್ಗೇರ್ ಸೇರಿದಂತೆ ಕೆಲವೊಂದು ಸೂಕ್ಷ್ಮ ಭಾಗಗಳನ್ನು ಪರಿಶೀಲಿಸಬಹುದಾಗಿದೆ.
source: NDTV
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.