ನವದೆಹಲಿ: ಡೋಕ್ಲಾಂ ಬಿಕ್ಕಟ್ಟು ನಡೆದ ಬಳಿಕ ಒಂದು ವರ್ಷಗಳ ತರುವಾಯ ಭಾರತ ಮತ್ತು ಚೀನಾ ಯಶಸ್ವಿ ಮಿಲಿಟರಿ ಡ್ರಿಲ್ನ್ನು ಆಯೋಜನೆಗೊಳಿಸಿವೆ.
ಚೀನಾದ ಸಿಚೋನ್ ಪ್ರಾಂತ್ಯದಲ್ಲಿ ಡಿಸೆಂಬರ್ 10ರಿಂದ ಮಿಲಿಟರಿ ಡ್ರಿಲ್ ಜರಗಿದೆ.ಉಭಯ ದೇಶಗಳ ಪಡೆಗಳು ಭಯೋತ್ಪಾದನಾ ವಿಶೇಷ ಜಂಟಿ ಕಾರ್ಯಾಚರಣೆಯನ್ನು ನಡೆಸಿವೆ. ಮೊನ್ನೆ ಭಾನುವಾರ ಮಿಲಿಟರಿ ಡ್ರಿಲ್ ಸಮಾಪನಗೊಂಡಿದೆ.
ಏಕೀಕೃತ ನೇರ ಫೈರಿಂಗ, ಭಯೋತ್ಪಾದನಾ ನೆಲೆ ಮೇಲೆ ದಾಳಿ, ಗುಪ್ತಚರ ಮಾಹಿತಿ ಕಲೆ ಹಾಕುವುದು ಇತ್ಯಾದಿಗಳನ್ನು ಜಂಟಿ ಸಮರಾಭ್ಯಾಸದಲ್ಲಿ ಅಭ್ಯಾಸಿಸಲಾಗಿದೆ ಎಂದು ಸೇನೆ ಹೇಳಿದೆ.
ವಿವಿಧ ಭಯೋತ್ಪಾದನಾ ವಿರೋಧಿ ಉಪನ್ಯಾಸ, ಚರ್ಚೆಯೊಂದಿಗೆ ಸಮರಾಭ್ಯಾಸವನ್ನು ಮುಕ್ತಾಯಗೊಳಿಸಲಾಗಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.