ನವದೆಹಲಿ: ದೇಶದ ಮೊತ್ತ ಮೊದಲ ಎಂಜಿನ್ ರಹಿತ ರೈಲು ಟ್ರೈನ್-18 ದೆಹಲಿ ಮತ್ತು ವಾರಣಾಸಿ ನಡುವೆ ಸಂಚರಿಸಲಿದೆ ಎಂದು ಸಂಸತ್ತಿಗೆ ಮಾಹಿತಿ ನೀಡಲಾಗಿದೆ.
ರಾಜ್ಯಸಭೆಗೆ ಲಿಖಿತ ಮಾಹಿತಿಯನ್ನು ನೀಡಿರುವ ರೈಲ್ವೇ ಸಚಿವಾಲಯದ ರಾಜ್ಯ ಖಾತೆ ಸಚಿವ ರಾಜೆನ್ ಗೊಹೆನ್ ಅವರು, 36 ಟ್ರೈನ್ ಸೆಟ್ ಕೋಚ್ಗಳನ್ನು 2018-19ರ ಅವಧಿಯಲ್ಲಿ ಉತ್ಪಾದನೆ ಮಾಡಲು ಇಂಟಿಗ್ರಲ್ ಕೋಚ್ ಫ್ಯಾಕ್ಟರಿ ಯೋಜನೆ ರೂಪಿಸಿದೆ ಎಂದಿದ್ದಾರೆ.
ಟ್ರೈನ್-18 ರೈಲ್ವೇಯ ಅತ್ಯಂತ ವೇಗದ ರೈಲಾಗಿದ್ದು, ಗಂಟೆಗೆ180 ಕಿಮೀ ವೇಗದಲ್ಲಿ ಸಂಚರಿಸಲಿದೆ.
ಸಿಸಿಟಿವಿ, ಅಟೋಮ್ಯಾಟಿಕ್ ಸ್ಲೈಂಡಿಂಗ್ ಡೋರ್, ಜಿಪಿಎಸ್ ಆಧಾರಿತ ಮಾಹಿತಿ ವ್ಯವಸ್ಥೆ ಇತ್ಯಾದಿಗಳನ್ನು ಇದು ಒಳಗೊಂಡಿದೆ.
source: zeenews
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.