ಕೋಲ್ಕತ್ತಾ: ದೇಶೀಯವಾಗಿ ನಿರ್ಮಾಣ ಮಾಡಿರುವ ’ಎಲ್-55’ ಎಂಬ ಹೆಸರಿನ ಲ್ಯಾಂಡಿಂಗ್ ಕ್ರಾಫ್ಟ್ ಯುಟಿಲಿಟಿ(ಎಲ್ಸಿಯು) ಶಿಪ್ನ್ನು ಬುಧವಾರ ಪೋರ್ಟ್ ಬ್ಲೇರ್ನಲ್ಲಿ ಭಾರತೀಯ ನೌಕಾಸೇನೆಗೆ ಸೇರ್ಪಡೆಗೊಳಿಸಲಾಗಿದೆ.
ಈ ಶಿಪ್ನ್ನು ಕೋಲ್ಕತ್ತಾದ ಗಾರ್ಡನ್ ರೀಚ್ ಶಿಪ್ಬಿಲ್ಡರ್ಸ್ ಆಂಡ್ ಎಂಜಿನಿಯರ್ಸ್ ಲಿಮಿಟೆಡ್ ನಿರ್ಮಾಣ ಮಾಡಿದೆ. ವೈಸ್ ಅಡ್ಮಿರಲ್ ಅಜಿತ್ ಕುಮಾರ್ ಅವರ ಸಮ್ಮುಖದಲ್ಲಿ ಇದನ್ನು ನೌಕೆಗೆ ಸೇರ್ಪಡೆಗೊಳಿಸಲಾಗಿದೆ.
ಎಲ್-55 ಹಡಗು ಮಾರ್ಕ್ 111 ಎಲ್ಸಿಯು ಹಡಗಿನ ಸುಧಾರಿತ ಆವೃತ್ತಿಯಾಗಿದೆ. ದಕ್ಷತೆ, ವಾಸಯೋಗ್ಯತೆ, ಸೂಕ್ಷ್ಮ ವಿಭಾಗಗಳನ್ನು ಸುಧಾರಣೆ ಮಾಡುವ ಸಲುವಾಗಿ ಗಣನೀಯ ಬದಲಾವಣೆಗಳನ್ನು ಇಲ್ಲಿ ಮಾಡಲಾಗಿದೆ.
ಮಾನವೀಯ ಮತ್ತು ವಿಪತ್ತು ನಿರ್ವಹಣಾ ಕಾರ್ಯಾಚರಣೆ, ಪರಿಹಾರ ಕಾರ್ಯಾಚರಣೆಗಳಿಗೂ ಇದನ್ನು ನಿಯೋಜನೆಗೊಳಿಸಲಾಗುತ್ತದೆ. ತುರ್ತು ಯುದ್ಧ ಪರಿಸ್ಥಿತಿಯಲ್ಲಿ ಸಹಾಯಕವಾಗುವ ಸಲುವಾಗಿ ಎರಡು ಗನ್ಗಳನ್ನು ಇದರಲ್ಲಿ ಅಳವಡಿಸಲಾಗಿದೆ.
source: zeenews
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.