ನವದೆಹಲಿ: ಹಿಂದೂಸ್ಥಾನ್ ಏರೋನ್ಯಾಟಿಕ್ಸ್ ಲಿಮಿಟೆಡ್(ಎಚ್ಎಎಲ್) ಅಭಿವೃದ್ಧಿಪಡಿಸುತ್ತಿರುವ ಮೂರನೇ ಮಾದರಿಯ ಲೈಟ್ ಯುಟಿಲಿಟಿ ಹೆಲಿಕಾಪ್ಟರ್(ಎಲ್ಯುಎಚ್) ತನ್ನ ಪ್ರಪ್ರಥಮ ಹಾರಾಟವನ್ನು ಡಿ.14ರಂದು ಯಶಸ್ವಿಗೊಳಿಸಿದೆ ಎಂಬುದಾಗಿ ವರದಿಗಳು ತಿಳಿಸಿವೆ.
ಈ ಯಶಸ್ಸಿನಿಂದ ಸರ್ಕಾರಿ ಸ್ವಾಮ್ಯದ ಎಚ್ಎಎಲ್ಗೆ ಹೆಚ್ಚಿನ ಉತ್ತೇಜನ ಸಿಕ್ಕಂತಾಗಿದ್ದು, ಶೀಘ್ರದಲ್ಲೇ ಈ ಲೈಟ್ ಯುಟಿಲಿಟಿ ಹೆಲಿಕಾಪ್ಟರ್ ಪ್ರಸ್ತುತ ಸೇನೆ ಕಾರ್ಯಾಚರಣೆಗೆ ಬಳಸುತ್ತಿರುವ ಹಳೆಯ ಮಾದರಿಯ ಚೀತಾ ಮತ್ತು ಚೇತಕ್ ಹೆಲಿಕಾಪ್ಟರ್ನ್ನು ರಿಪ್ಲೇಸ್ ಮಾಡಲಿದೆ.
‘ಈ ಸಾಧನೆಯಿಂದ, ಎಲ್ಯುಎಚ್ ಉತ್ಪಾದನಾ ಅನುಮೋದನೆಗೆ ತೀರಾ ಹತ್ತಿರವಾಗಿದೆ ಮತ್ತು ಎಚ್ಎಎಲ್ ಶಸ್ತ್ರಾಸ್ತ್ರ ಪಡೆಗಳ ಅಗತ್ಯತೆಗಳನ್ನು ಪೂರೈಸುವ ಭರವಸೆಯನ್ನು ಹೊಂದಿದೆ’ ಎಂದು ಎಚ್ಎಎಲ್ ಮುಖ್ಯಸ್ಥ ಆರ್.ಮಾಧವನ್ ಹೇಳಿದ್ದಾರೆ.
ಎಲ್ಎಚ್ಯು ಮೂರು ಟನ್ ಭಾರದ ಸಿಂಗಲ್ ಎಂಜಿನ್ ಲೈಟ್ ಯುಟಿಲಿಟಿ ಹೆಲಿಕಾಪ್ಟರ್ ಆಗಿದ್ದು, ಎಚ್ಎಎಲ್ನ ರೋಟರಿ ವಿಂಗ್ ರಿಸರ್ಚ್ ಆಂಡ್ ಡಿಸೈನ್ ಸೆಂಟರ್ ಇದನ್ನು ದೇಶೀಯವಾಗಿ ವಿನ್ಯಾಸ ಮತ್ತು ನಿರ್ಮಾಣ ಮಾಡಿದೆ. ಗಂಟೆಗೆ 260 ಕಿಲೋಮೀಟರ್ಗಳ ವೇಗವನ್ನು ಇದು ಹೊಂದಿದ್ದು, 350ಕಿಮೀ ರೇಂಜ್ ಹೊಂದಿದೆ. ಇಬ್ಬರು ಪೈಲೆಟ್ ಮತ್ತು ಆರು ಪ್ರಯಾಣಿಕರಿಗೆ ಇದರಲ್ಲಿ ಪ್ರಯಾಣಿಸಲು ಸ್ಥಳಾವಕಾಶವಿದೆ.
source: swarajyamag.com
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.