ನವದೆಹಲಿ: ಭಾರತದ ಎಕ್ಸ್ಪ್ರೆಸ್ ವೇ, ವಾಟರ್ ವೇ, ನೀರಾವರಿ ಯೋಜನೆ ಮತ್ತು ಗಂಗಾ ಶುದ್ಧೀಕರಣ ಯೋಜನೆಗಳಲ್ಲಿ ಹೂಡಿಕೆ ಮಾಡುವಂತೆ ಖಾಸಗಿ ಸಂಸ್ಥೆಗಳಿಗೆ ಕೇಂದ್ರ ಸಚಿವ ನಿತಿನ್ ಗಡ್ಕರಿ ಆಹ್ವಾನ ನೀಡಿದ್ದಾರೆ.
ಎಫ್ಐಸಿಸಿಐ ವಾರ್ಷಿಕ ಪ್ರಧಾನ ಸಭೆಯನ್ನು ವೀಡಿಯೋ ಕಾನ್ಫರೆನ್ಸ್ ಮೂಲಕ ಉದ್ದೇಶಿಸಿ ಮಾತನಾಡಿದ ಅವರು, ‘ಅತೀ ಶೀಘ್ರದಲ್ಲಿ ಬೆಳವಣಿಗೆ ಕಾಣುತ್ತಿರುವ ಎಕ್ಸ್ಪ್ರೆಸ್ ವೇ, ವಾಟರ್ ವೇ, ನೀರಾವರಿಗಳಲ್ಲಿ ಖಾಸಗಿ ಸಂಸ್ಥೆಗಳು ಹೂಡಿಕೆ ಮಾಡುವತ್ತ ಗಮನವಹಿಸಬೇಕು’ ಎಂದಿದ್ದಾರೆ.
‘ಎಕ್ಸ್ಪ್ರೆಸ್ ವೇಗಳ ಅಭಿವೃದ್ಧಿಗಾಗಿ ಭೂಮಿ ಸ್ವಾಧೀನ ವ್ಯಯವನ್ನು ನಮ್ಮ ಸರ್ಕಾರ ಸಾಕಷ್ಟು ತಗ್ಗಿಸಿದೆ. ಕಿಲೋಮೀಟರ್ಗೆ ರೂ.7.5 ಕೋಟಿಯಿಂದ ರೂ.80ಲಕ್ಷದವರೆಗೆ ಇಳಿಸಲಾಗಿದೆ. ಇದರ ಪ್ರಯೋಜನವನ್ನು ಹೂಡಿಕೆದಾರರು ಪಡೆದುಕೊಳ್ಳಬೇಕು’ ಎಂದರು.
ಬುಲೆಟ್ ರೈಲು ಯೋಜನೆಗೂ ಭೂಮಿಗಳು ಲಭ್ಯವಿದೆ ಎಂದು ಅವರು ತಿಳಿಸಿದ್ದಾರೆ.
source: the quint
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.