ನವದೆಹಲಿ: ರಕ್ಷಣಾ ಸಚಿವೆ ನಿರ್ಮಲಾ ಸೀತಾರಾಮನ್ ಅವರು ಗುರುವಾರ ನವದೆಹಲಿಯಲ್ಲಿ ರಷ್ಯಾ ಫೆಡರೇಶನ್ ಜನರಲ್ ಸೆರ್ಗಿ ಶೋಯ್ಗು ಅವರನ್ನು ಭೇಟಿಯಾಗಿ, 18 ನೇ ಇಂಡಿಯಾ-ರಷ್ಯಾ ಇಂಟರ್ ಗವರ್ನ್ಮೆಂಟಲ್ ಕಮಿಷನ್ ಆನ್ ಮಿಲಿಟರಿ ಟೆಕ್ನಿಕಲ್ ಕಾರ್ಪೋರೇಶನ್ (IRIGC-MTC)ಸಭೆ ನಡೆಸಿದರು.
ಈ ಬಗ್ಗೆ ರಕ್ಷಣಾ ಸಚಿವಾಲಯ ಟ್ವಿಟ್ ಮಾಡಿದ್ದು, ’ರಕ್ಷಣಾ ಮಂತ್ರಿ ನಿರ್ಮಲಾ ಸೀತಾರಾಮನ್ ಅವರು ಶೊಯ್ಗು ಅವರೊಂದಿಗೆ 18ನೇ ಸಭೆಯನ್ನು ನಡೆಸಿದ್ದು, ಇಂಡಿಯಾ-ರಷ್ಯಾ ಇಂಟರ್ ಗವರ್ನ್ಮೆಂಟಲ್ ಕಮಿಷನ್ ಆನ್ ಮಿಲಿಟರಿ ಆಂಡ್ ಮಿಲಿಟರಿ ಟೆಕ್ನಿಕಲ್ ಕಾರ್ಪೋರೇಶನ್ ಸ್ಥಾಪನೆಯ ಶಿಷ್ಟಾಚಾರಕ್ಕೆ ಸಹಿಯನ್ನು ಹಾಕಲಾಗಿದೆ’ ಎಂದಿದೆ.
ದ್ವಿಪಕ್ಷೀಯ ಮತ್ತು ವಿಶೇಷವಾದ ಕಾರ್ಯತಂತ್ರದ ಸಹಭಾಗಿತ್ವದ ಚೌಕಟ್ಟಿನಲ್ಲಿ, IRIGC-MTC ಸಭೆಯಲ್ಲಿ ರಕ್ಷಣಾ ಸಲಕರಣೆಗಳು, ಉದ್ಯಮ ಮತ್ತು ಭಾರತ ಮತ್ತು ರಷ್ಯಾ ನಡುವಿನ ತಾಂತ್ರಿಕ ಸಹಕಾರಗಳ ಬಗ್ಗೆ ವ್ಯಾಪಕವಾದ ವಿಚಾರಗಳನ್ನು ಚರ್ಚಿಸಲಾಯಿತು ಮತ್ತು ರಷ್ಯಾ ಮೂಲದ ಸೇನಾ ಸಾಧನಗಳ ಮಾರಾಟದ ಬೆಂಬಲ / ಉನ್ನತೀಕರಣದ ಬಗ್ಗೆಯೂ ಚರ್ಚೆ ನಡೆದಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.