ವಾಷಿಂಗ್ಟನ್; ಅಮೆರಿಕಾದ ಮೊತ್ತ ಮೊದಲ ಹಿಂದೂ ಸಂಸದೆಯಾಗಿರುವ ತುಳಸಿ ಗಬ್ಬಾರ್ಡ್ ಅವರು, 2020ರ ಅಧ್ಯಕ್ಷೀಯ ಚುನಾವಣೆಗೆ ಸ್ಪರ್ಧಿಸಲು ಅತ್ಯಂತ ಗಂಭೀರ ಚಿಂತನೆಯನ್ನು ನಡೆಸುತ್ತಿದ್ದಾರೆ. ಅಧ್ಯಕ್ಷೀಯ ಹುದ್ದೆಯನ್ನೇರುವ ತಮ್ಮ ಇಂಗಿತವನ್ನು ಅವರೇ ಬಹಿರಂಗಪಡಿಸಿದ್ದಾರೆ.
ಡೆಮಾಕ್ರಾಟಿಕ್ ಪಕ್ಷದ ಗಬ್ಬಾರ್ಡ್ ಅವರು, ಯುಎಸ್ ಹೌಸ್ ಆಫ್ ರೆಪ್ರೆಸೆಂಟೇಟಿವ್ನಲ್ಲಿ ನಾಲ್ಕನೇ ಬಾರಿಗೆ ಹವಾಯಿ ಕ್ಷೇತ್ರವನ್ನು ಪ್ರತಿನಿಧಿಸುತ್ತಿದ್ದಾರೆ. ಇದೀಗ ಅವರು, ಅಧ್ಯಕ್ಷೀಯ ಚುನಾವಣೆಗೆ ಸ್ಪರ್ಧಿಸುವ ಬಗ್ಗೆ ಅತ್ಯಂತ ಗಂಭೀರವಾಗಿ ಚಿಂತನೆ ನಡೆಸುತ್ತಿದ್ದೇನೆ ಎಂದು ಹೇಳಿಕೊಂಡಿದ್ದಾರೆ.
ಒಂದು ವೇಳೆ ಈಕೆ ಅಧ್ಯಕ್ಷೀಯ ಚುನಾವಣೆಯಲ್ಲಿ ಅಭ್ಯರ್ಥಿಯಾದರೆ, ಅಮೆರಿಕಾದ ಇತಿಹಾಸದಲ್ಲೇ ಮೊದಲ ಬಾರಿಗೆ ಹಿಂದೂ ಧರ್ಮಿಯರೊಬ್ಬರು ಅಧ್ಯಕ್ಷೀಯ ಚುನಾವಣೆಗೆ ಸ್ಪರ್ಧಿಸಿದ ದಾಖಲೆ ನಿರ್ಮಾಣ ಮಾಡಲಿದ್ದಾರೆ. ವಿಜೇತಳಾದರೆ, ಅಮೆರಿಕಾದ ಅತ್ಯಂತ ಯುವ ಮತ್ತು ಮೊದಲ ಮಹಿಳಾ ಅಧ್ಯಕೆಯಾಗಲಿದ್ದಾರೆ.
2020ರ ನವೆಂಬರ್ನಲ್ಲಿ ಡೊನಾಲ್ಡ್ ಟ್ರಂಪ್ ಅವರನ್ನು ಎದುರಿಸುವ ಮೊದಲು, ಈಕೆ ಡೆಮಾಕ್ರಾಟಿಕ್ ಪಕ್ಷದ ಪ್ರಾಥಮಿಕ ಚುನಾವಣೆಯಲ್ಲಿ ಜಯ ಗಳಿಸುವುದು ಕಡ್ಡಾಯವಾಗಿದೆ.
ತುಳಸಿ ಹೆತ್ತವರು ವಿದೇಶಿಗರೇ ಆಗಿದ್ದರು, ಹಿಂದೂ ಧರ್ಮದ ಆಚಾರ ವಿಚಾರಗಳನ್ನು ಅರಿತವರಾಗಿದ್ದಾರೆ. ಹೀಗಾಗಿ ಇವರು ಸ್ವಪ್ರೇರಣೆಯಿಂದಲೇ ಹಿಂದೂ ಧರ್ಮವನ್ನು ಅಧಿಕೃತವಾಗಿ ಅನುರಿಸುತ್ತಿದ್ದಾರೆ.
source: www.indiatoday.in
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.