ಬೆಂಗಳೂರು: ಮಹಿಳೆಯರಿಗೆ ಶೇ.33ರಷ್ಟು ಮೀಸಲಾತಿಯನ್ನು ನೀಡಬೇಕು ಎಂದು ಬೆಂಗಳೂರು ಮೆಟ್ರೋಪಾಲಿಟನ್ ಟ್ರಾನ್ಸ್ಪೋರ್ಟ್ ಕಾರ್ಪೋರೇಶನ್(ಬಿಎಂಟಿಸಿ)ಯ ಯೋಜನೆ ಹಾಕಿಕೊಂಡಿದ್ದರೂ, ಇನ್ನೂ ಅದಕ್ಕೆ ಆರಂಭವೇ ಸಿಕ್ಕಿಲ್ಲ. ಆದರೆ ಇತ್ತೀಚಿಗೆ ಬದಲಾವಣೆಯ ಗಾಳಿ ಬೀಸುತ್ತಿದೆ, ನಿರ್ಭಯಾ ಫಂಡ್ ಮಹಿಳೆಯರನ್ನು ಬಸ್ ಓಡಿಸುವ ಕನಸಿಗೆ ನೀರೆರೆದಿದೆ.
ಮಹಿಳೆಯರಿಗೆ ಚಾಲನಾ ತರಬೇತಿಯನ್ನು ನೀಡಲು, ನಿರ್ಭಯಾ ಫಂಡ್ನಿಂದ ಬಿಎಂಟಿಸಿಗೆ ರೂ.7.5 ಕೋಟಿಗಳನ್ನು ಬಿಡುಗಡೆ ಮಾಡಲಾಗಿದೆ. ಇದರಡಿ 1 ಸಾವಿರ ಮಹಿಳೆಯರು ತರಬೇತಿ ಪಡೆಯಲಿದ್ದಾರೆ. ಈಗಾಗಲೇ 115 ಮಹಿಳೆಯರು ತರಬೇತಿಗೆ ನೋಂದಾವಣೆ ಮಾಡಿಕೊಂಡಿದ್ದಾರೆ. ಇವರಲ್ಲಿ 103 ಮಂದಿಗೆ ಲಘು ವಾಹನ ಚಲಾಯಿಸಲು ಮತ್ತು 12 ಮಂದಿಗೆ ಘನ ವಾಹನ ಚಲಾಯಿಸಲು ಉಚಿತವಾಗಿ ತರಬೇತಿ ನೀಡಲಾಗುತ್ತಿದೆ.
ಒಂದು ವರ್ಷಗಳಿಂದ ಲಘು ವಾಹನ ಚಾಲನಾ ವರವಾನಗಿ ಹೊಂದಿದವರು, ಬಸ್ ಓಡಿಸಲು ಲೈಸೆನ್ಸ್ ಪಡೆಯಬಹುದಾಗಿದೆ. ಲಘು ವಾಹನ ಚಲಾವಣೆಗೆ ಅರ್ಜಿ ಹಾಕಿದವರಿಗೆ ನಗರದ ರಸ್ತೆಗಳಲ್ಲಿ ಮತ್ತು ಘನ ವಾಹನ ಚಲಾವಣೆಗೆ ಅರ್ಜಿ ಹಾಕಿದವರಿಗೆ ಆಯಾ ತರಬೇತಿ ಕೇಂದ್ರಗಳಲ್ಲಿ ತರಬೇತಿಯನ್ನು ನೀಡಲಾಗುತ್ತದೆ.
ತರಬೇತಿ ಪಡೆದ ಬಳಿಕ ಬಿಎಂಟಿಸಿಗೆ ಸೇರುವುದು ಈ ಮಹಿಳೆಯರ ಉದ್ದೇಶವಾಗಿದೆ.
source: timeofindia
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.