ಮುಂಬಯಿ: ಕೇವಲ ನಾಲ್ಕೂವರೆ ವರ್ಷಗಳಲ್ಲಿ ಪೈಪ್ಡ್ ನ್ಯಾಚುರಲ್ ಗ್ಯಾಸ್(ಪಿಎನ್ಜಿ) ಸಂಪರ್ಕ ಮುಂಬಯಿಯ 4 ಲಕ್ಷ ಮನೆಗಳಿಗೆ ತಲುಪಿದೆ ಎಂದು ಕೇಂದ್ರ ಇಂಧನ ಸಚಿವ ಧರ್ಮೆಂದ್ರ ಪ್ರಧಾನ್ ಹೇಳಿದ್ದಾರೆ.
ಮುಂಬಯಿಯ ಕರೂರ್ ಗ್ರಾಮದಲ್ಲಿ ಪಿಎಸ್ಜಿ ಉದ್ಘಾಟನಾ ಸಮಾರಂಭವನ್ನು ಉದ್ದೇಶಿಸಿ ಅವರು ಮಾತನಾಡಿದರು.
1995-2014ರವರೆಗೆ ಅಂದರೆ ಬರೋಬ್ಬರಿ 19 ವರ್ಷಗಳ ಕಾಲ ಪೈಪ್ಡ್ ನ್ಯಾಚುರಲ್ ಗ್ಯಾಸ್ ಸಂಪರ್ಕ ಕೇವಲ 6 ಲಕ್ಷ ಮನೆಗಳನ್ನು ತಲುಪಿತ್ತು. ಆದರೆ 2014ರ ಬಳಿಕ ಇದುವರೆಗೆ 4 ಲಕ್ಷ ಮನೆಗಳಿಗೆ ಸಂಪರ್ಕ ತಲುಪಿದೆ ಎಂದಿದ್ದಾರೆ.
ಪಿಎನ್ಜಿ ಅತ್ಯಂತ ಅಗ್ಗ, ಪರಿಸರ ಸ್ನೇಹಿ, ದಕ್ಷ, ವಿಶ್ವಾಸಾರ್ಹವಾಗಿದ್ದು, ಮುಂದಿನ ಎರಡು ವರ್ಷಗಳಲ್ಲಿ ದೇಶದ ವಾಣಿಜ್ಯ ರಾಜಧಾನಿ ಮುಂಬಯಿಯ ಮತ್ತೆ 10 ಲಕ್ಷ ಮನೆಗಳು ಈ ಸೌಲಭ್ಯವನ್ನು ಪಡೆದುಕೊಳ್ಳಲಿವೆ ಎಂದಿದ್ದಾರೆ.
source: ANI
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.