ವಿಶ್ವಸಂಸ್ಥೆ: ಪಾಕಿಸ್ಥಾನ ಭಯೋತ್ಪಾದನೆಯನ್ನು ಪೋಷಿಸುವುದನ್ನು ಮುಂದುವರೆಸಿದ್ದು, ಅವರ ಮೂಲಕ ಅಮೆರಿಕಾ ಸೈನಿಕರನ್ನು ಹತ್ಯೆ ಮಾಡಿಸುತ್ತಿದೆ ಎಂದು ವಿಶ್ವಸಂಸ್ಥೆಯ ಅಮೆರಿಕಾ ರಾಯಭಾರಿ ನಿಕ್ಕಿ ಹಾಲೆ ಗಂಭೀರ ಆರೋಪ ಮಾಡಿದ್ದಾರೆ. ಮಾತ್ರವಲ್ಲ, ಭಯೋತ್ಪಾದನೆ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವವರೆಗೂ ಆ ದೇಶಕ್ಕೆ ಬಿಡಿಗಾಸನ್ನೂ ನೀಡಬಾರದು ಎಂದು ಪ್ರತಿಪಾದಿಸಿದ್ದಾರೆ.
ಅಮೆರಿಕಾಗೆ ಹಾನಿಯುಂಟು ಮಾಡಲು ಬಯಸುವ, ನಮಗೆ ಹಿನ್ನಡೆಯುಂಟು ಮಾಡಲು ಹವಣಿಸುವ ರಾಷ್ಟ್ರಗಳಿಗೆ ಹಣ ನೀಡುವ ಅಗತ್ಯ ಅಮೆರಿಕಾಗೆ ಇಲ್ಲ ಎಂದಿರುವ ಅವರು, ನಾವು ಪಾಲುದಾರತ್ವ ಹೊಂದುವ ರಾಷ್ಟ್ರಗಳ ಬಗ್ಗೆ ನಮಗೆ ತಂತ್ರಗಾರಿಕ ದೃಷ್ಟಕೋನ ಇರಬೇಕಾದುದು ಅವಶ್ಯಕ ಎಂದಿದ್ದಾರೆ.
ತಮ್ಮನ್ನು ತಾವು ತಿದ್ದಿಕೊಳ್ಳದ ಹೊರತು ಪಾಕ್ಗೆ ಮಿಲಿಯನ್ ಡಾಲರ್ ಬಿಡಿ, ಒಂದು ಡಾಲರ್ನ್ನೂ ನೀಡಬಾರದು ಎಂದಿದ್ದಾರೆ.
ಹಾಲೆಯವರು, ಅಮೆರಿಕಾ ಅಧ್ಯಕ್ಷೀಯ ಆಡಳಿತದಲ್ಲಿ ಸಂಪುಟ ದರ್ಜೆ ಹುದ್ದೆಯನ್ನು ಪಡೆದ ಮೊದಲ ಅನಿವಾಸಿ ಭಾರತೀಯರಾಗಿದ್ದಾರೆ.
source: zeenews
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.