ವಿಯೆನ್ನಾ: ತೈಲ ಬೆಲೆಗಳನ್ನು ನಿಗದಿಪಡಿಸುವ ಸಂದರ್ಭದಲ್ಲಿ ಭಾರತದ ಪ್ರಧಾನಿ ನರೇಂದ್ರ ಮೋದಿಯವರ ಅನಿಸಿಕೆಗಳನ್ನು ಗಂಭೀರವಾಗಿ ಪರಿಗಣಿಸುತ್ತೇನೆ ಎಂದು ಸೌದಿ ಇಂಧನ ಸಚಿವ ಖಲೀದ್ ಅಲಿ ಫಲಿಹ್ ಹೇಳಿದ್ದಾರೆ.
ಆರ್ಗನೈಝೇಶನ್ ಆಫ್ ಪೆಟ್ರೋಲಿಯಂ ಎಕ್ಸ್ಪೋರ್ಟಿಂಗ್ ಕಂಟ್ರೀಸ್(ಓಪಿಇಎಸ್) ಸಭೆಯನ್ನು ಉದ್ದೇಶಿಸಿ ಮಾತನಾಡಿದ ಖಲೀದ್, ’ತೈಲ ದರದ ವಿಷಯದಲ್ಲಿ ಅನಿಸಿಕೆಗಳನ್ನು ವ್ಯಕ್ತಪಡಿಸುವುದರಲ್ಲಿ ಮುಂಚೂಣಿಯಲ್ಲಿರುವ ಮೋದಿಯವರ ಅನಿಸಿಕೆಗಳನ್ನು ಗಂಭೀರವಾಗಿ ಪರಿಗಣಿಸುತ್ತೇವೆ. ಅವರನ್ನು ನಾವು ಜಿ20 ಸಮಿತ್ ವೇಳೆ ಬ್ಯೂನಸ್ ಏರ್ಸ್ನಲ್ಲಿ ಭೇಟಿಯಾಗಿದ್ದೆವು. ಖಾಸಗಿಯಾಗಿ ಅವರು ನಮ್ಮೊಂದಿಗೆ ಕೆಲವೊಂದು ಅನಿಸಿಕೆಗಳನ್ನು ವ್ಯಕ್ತಪಡಿಸಿದ್ದಾರೆ. ಅವರಿಗೆ ಭಾರತೀಯ ಗ್ರಾಹಕರ ಬಗ್ಗೆ ಅತಿಯಾದ ಕಾಳಜಿಯಿದೆ’ ಎಂದಿದ್ದಾರೆ.
ಭಾರತ ವಿಶ್ವದ ಮೂರನೇ ಅತೀದೊಡ್ಡ ಇಂಧನ ಆಮದುದಾರ ರಾಷ್ಟ್ರವಾಗಿದ್ದು, ಇಲ್ಲಿನ ಶೇ.80ರಷ್ಟು ತೈಲಗಳು ವಿದೇಶದಿಂದಲೇ ಆಮದುಗೊಳ್ಳುತ್ತದೆ. ಸಮಂಜಸವಾದ ರೀತಿಯಲ್ಲಿ ಕಚ್ಛಾತೈಲ ಬೆಲೆಗಳನ್ನು ನಿಗದಿಪಡಿಸಬೇಕು ಎಂದು ಪ್ರಧಾನಿ ಮೋದಿ ಬಲವಾಗಿ ಪ್ರತಿಪಾದಿಸುತ್ತಲೇ ಬಂದಿದ್ದಾರೆ.
source: NDTV
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.