ನವದೆಹಲಿ: ಫೇಸ್ಬುಕ್, ಟ್ವಿಟರ್ ಮಾತ್ರವಲ್ಲದೇ, ಇನ್ಸ್ಟಾಗ್ರಾಂನಲ್ಲೂ ಪ್ರಧಾನಿ ನರೇಂದ್ರ ಮೋದಿ ಭಾರೀ ಜನಪ್ರಿಯರಾಗಿದ್ದಾರೆ. ಈ ಫೋಟೋ ಶೇರಿಂಗ್ ಆ್ಯಪ್ನಲ್ಲೂ ಅವರಿಗೆ ಅತ್ಯಧಿಕ ಪ್ರಮಾಣದ ಹಿಂಬಾಲಕರಿದ್ದಾರೆ. ಹೀಗಾಗಿಯೇ ಇನ್ಸ್ಟಾಗ್ರಾಂನಲ್ಲಿ ಅತ್ಯಧಿಕ ಸಂಖ್ಯೆಯ ಹಿಂಬಾಲಕರನ್ನು ಹೊಂದಿರುವ ವಿಶ್ವ ನಾಯಕನಾಗಿ ಹೊರಹೊಮ್ಮಿದ್ದಾರೆ.
ಟ್ವಿಪ್ಲೊಮಸಿ ಎಂಬ ಆನ್ಲೈನ್ ವೇದಿಕೆ ಇನ್ಸ್ಟಾಗ್ರಾಂನಲ್ಲಿ ಅತ್ಯಧಿಕ ಹಿಂಬಾಲಕರನ್ನು ಹೊಂದಿರುವ ವಿಶ್ವ ನಾಯಕರ ಪಟ್ಟಿಯನ್ನು ಬಿಡುಗಡೆಗೊಳಿಸಿದೆ. ಈ ಪಟ್ಟಿಯಲ್ಲಿ 14.8 ಮಿಲಿಯನ್ ಹಿಂಬಾಲಕರನ್ನು ಹೊಂದಿರುವ ಮೋದಿ ನಂ.1 ಸ್ಥಾನ ಪಡೆದುಕೊಂಡಿದ್ದಾರೆ.
ಮೋದಿ ಬಳಿಕದ ಸ್ಥಾನವನ್ನು ಇಂಡೋನೇಷ್ಯಾ ಅಧ್ಯಕ್ಷ ಜೋಕೊ ವಿಡೋಡೊ ಪಡೆದುಕೊಂಡಿದ್ದು, ಅವರಿಗೆ ಇನ್ಸ್ಟಾಗ್ರಾಂನಲ್ಲಿ 12.2 ಮಿಲಿಯನ್ ಹಿಂಬಾಲಕರಿದ್ದಾರೆ. 10 ಮಿಲಿಯನ್ ಹಿಂಬಾಲಕರನ್ನು ಹೊಂದಿರುವ ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ 3ನೇ ಸ್ಥಾನ ಪಡೆದುಕೊಂಡಿದ್ದಾರೆ.
ಭಾರತದ ಕ್ರಿಕೆಟ್ ತಂಡದ ನಾಯಕ ವಿರಾಟ್ ಕೊಹ್ಲಿ, ಅವರ ಪತ್ನಿ ಅನುಷ್ಕಾ ಶರ್ಮಾ ಮೋದಿಯವರನ್ನು ಭೇಟಿ ಮಾಡಿದ ಫೋಟೋ ಅತೀ ಹೆಚ್ಚು ಲೈಕ್ಗಳನ್ನು ಪಡೆದ ಫೋಟೋ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. ಈ ಮೂವರ ಒಟ್ಟು ಇನ್ಸ್ಟಾಗ್ರಾಂ ಹಿಂಬಾಲಕರನ್ನು ಲೆಕ್ಕಹಾಕಿದರೆ 55 ಮಿಲಿಯನ್ ಆಗುತ್ತದೆ. ಈ ಫೋಟೋಗೆ ಬಂದ ಲೈಕ್ಸ್ 18,34,807 ಆಗಿದೆ.
ವರ್ಲ್ಡ್ ಎಕನಾಮಿಕ್ ಫೋರಂನ ಸಂದರ್ಭ ಸ್ನೋವಿ ಡಾವೋಸ್ನಲ್ಲಿ ಬಸ್ಸ್ಟಾಪ್ನಲ್ಲಿ ನಿಂತಿದ್ದ ಮೋದಿ ಫೋಟೋ ಎರಡನೇ ಅತೀಹೆಚ್ಚು ಲೈಕ್ಸ್ ಪಡೆದ ಫೋಟೋವಾಗಿದೆ.
source: www.newsonair.com
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.