ಬೆಂಗಳೂರು: ಭಾರತದ ಅತೀ ತೂಕದ ಸೆಟ್ಲೈಟ್ ಜಿಸ್ಯಾಟ್-11ನ್ನು ಬುಧವಾರ ಫ್ರೆಂಚ್ ಗಯಾನಾದಲ್ಲಿ ಏರಿಯನ್ಸ್ಪೇಸ್ ರಾಕೆಟ್ ಮೂಲಕ ಯಶಸ್ವಿಯಾಗಿ ಉಡಾವಣೆಗೊಳಿಸಲಾಗಿದೆ. ಭಾರತದ ಬ್ರಾಂಡ್ ಬ್ಯಾಂಡ್ ಸೇವೆಗಳನ್ನು ಉತ್ತೇಜಿಸುವ ಸೆಟ್ಲೈಟ್ ಇದಾಗಿದೆ.
ಗಯಾನದ ಕೌರೋದ ಏರಿಯಾನೆ ಲಾಂಚ್ ಕಾಂಪ್ಲೆಕ್ಸ್ನಿಂದ ಜಿಸ್ಯಾಟ್-11ನ್ನು ಉಡಾವಣೆಗೊಳಿಸಲಾಗಿದೆ. ಈ ಉಡಾವಣೆಯ ದೃಶ್ಯವನ್ನು ದೂರದರ್ಶನದಲ್ಲಿ ನೇರಪ್ರಸಾರ ಮಾಡಲಾಗಿತ್ತು.
ಭಾರತ ಇದುವರೆಗೆ ನಿರ್ಮಿಸಿದ ಅತೀ ಭಾರದ, ಅತೀ ದೊಡ್ಡ ಸೆಟ್ಲೈಟ್ನ್ನು ಏರಿಯಾನೆ-5 ಮೂಲಕ ಯಶಸ್ವಿಯಾಗಿ ಉಡಾವಣೆಗೊಳಿಸಲಾಗಿದೆ ಎಂದು ಇಸ್ರೋ ಮುಖ್ಯಸ್ಥ ಕೆ.ಶಿವನ್ ಹೇಳಿದ್ದಾರೆ.
ಜಿಸ್ಯಾಟ್-11 ಭಾರತದ ಅತ್ಯಂತ ಶ್ರೀಮಂತ ಸೆಟ್ಲೈಟ್ ಆಗಲಿದ್ದು, 38 ಸ್ಪಾಟ್ ಬೀಮ್, 8 ಸಬ್ ಬೀಮ್ಗಳನ್ನು ಒಳಗೊಂಡಿದೆ, ಇದು ದೇಶಕ್ಕೆ 16 ಜಿಬಿಪಿಎಸ್ ಡಾಟಾ ಲಿಂಕ್ ಸೇವೆ ಒದಗಿಸಲಿದೆ ಎಂದರು.
source: zeenews.india.com
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.