ನವದೆಹಲಿ: ಇಂಟರ್ನ್ಯಾಷನಲ್ ಶೂಟಿಂಗ್ ಫೆಡರೇಶನ್ (ISSF)ನ ಜಡ್ಜ್ ಸಮಿತಿಯ 7 ಸದಸ್ಯರ ಪೈಕಿ ಭಾರತದ ಪವಣ್ ಸಿಂಗ್ ಕೂಡ ಒಬ್ಬರಾಗಿ ನೇಮಕವಾಗಿದ್ದಾರೆ. ಈ ಸ್ಥಾನವನ್ನು ಅಲಂಕರಿಸಿದ ಮೊತ್ತ ಮೊದಲ ಭಾರತೀಯ ಎಂಬ ಹೆಗ್ಗಳಿಕೆ ಅವರದ್ದಾಗಿದೆ.
ಇಷ್ಟೇ ಅಲ್ಲದೇ, ಸಿಂಗ್ ಅವರು ನ್ಯಾಷನಲ್ ರೈಫಲ್ ಅಸೋಸಿಯೇಶನ್ ಆಫ್ ಇಂಡಿಯಾ (ಎನ್ಆರ್ಎಐ)ನ ಜಂಟಿ ಪ್ರಧಾನ ಕಾರ್ಯದರ್ಶಿಯೂ ಆಗಿ ಸೇವೆ ಸಲ್ಲಿಸುತ್ತಿದ್ದಾರೆ.
7 ಸದಸ್ಯರನ್ನು ಒಳಗೊಂಡ ಇಂಟರ್ನ್ಯಾಷನಲ್ ಶೂಟಿಂಗ್ ಫೆಡರೇಶನ್ನ ಜಡ್ಜ್ ಸಮಿತಿಗೆ ವಿಶ್ವದಾದ್ಯಂತದ 22 ಅಭ್ಯರ್ಥಿಗಳು ಸ್ಪರ್ಧಿಸಿದ್ದರು.ISSFನ ಆಡಳಿತ ಮಂಡಳಿ ಸದಸ್ಯರು ಮತ ಹಾಕಿ ಸದಸ್ಯರನ್ನು ಆರಿಸಿದ್ದಾರೆ. ಪ್ರತಿ ನಾಲ್ಕು ವರ್ಷಗಳಿಗೊಮ್ಮೆ ಈ ಚುನಾವಣೆ ನಡೆಯುತ್ತದೆ.
ಕೆಳ ದಿನಗಳ ಹಿಂದೆಯಷ್ಟೇ ಎನ್ಆರ್ಎಐ ಅಧ್ಯಕ್ಷ ರನೀನ್ದರ್ ಸಿಂಗ್ ಅವರು, ಐಎಸ್ಎಸ್ಎಫ್ನ ಉಪಾಧ್ಯಕ್ಷರಾಗಿ ನೇಮಕವಾಗಿದ್ದರು.
source: www.newsonair.com
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.