ನವದೆಹಲಿ: ದಿವ್ಯಾಂಗ ಮಕ್ಕಳು ತಮ್ಮ ಶಾಲಾ ಸಮವಸ್ತ್ರ, ಪುಸ್ತಕಗಳಿಗಾಗಿ ವ್ಯಯಿಸಿರುವ ವೆಚ್ಚವನ್ನು ಸರ್ಕಾರ ಮರುಪಾವತಿಸಲಿದೆ ಎಂದು ಕೇಂದ್ರ ಮಾನವ ಸಂಪನ್ಮೂಲ ಸಚಿವಾಲಯದ ರಾಜ್ಯ ಖಾತೆ ಸಚಿವ ಸತ್ಯಪಾಲ್ ಸಿಂಗ್ ಹೇಳಿದ್ದಾರೆ.
ದಿವ್ಯಾಂಗರಿಗೆ ಸಂಬಂಧಿಸಿದ ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದ ಅವರು, ದೇಶದ ಎಲ್ಲಾ ಶಾಲೆಗಳಿಗೂ ದಿವ್ಯಾಂಗ ಮಕ್ಕಳು ಸಮವಸ್ತ್ರ , ಪುಸ್ತಕಗಳಿಗೆ ಭರಿಸಿದ ವೆಚ್ಚವನ್ನು ಸರ್ಕಾರ ಮರುಪಾವತಿ ಮಾಡಲಿದೆ ಎಂಬ ನಿರ್ದೇಶನವನ್ನು ಶೀಘ್ರದಲ್ಲೇ ನೀಡಲಾಗುತ್ತದೆ ಎಂದಿದ್ದಾರೆ.
ದೇಶದಲ್ಲಿ 12 ಮಿಲಿಯನ್ ದಿವ್ಯಾಂಗರಿದ್ದಾರೆ, ಅವರಲ್ಲಿ ಕೇವಲ ಶೇ.1ರಷ್ಟು ಮಂದಿ ಶಾಲೆಗೆ ಹೋಗುತ್ತಾರೆ ಎಂದ ಅವರು, ದಿವ್ಯಾಂಗರಿಗೆ ನಮ್ಮ ಅನುಕಂಪ ಬೇಕಾಗಿಲ್ಲ, ಅವರಿಗೆ ಶಿಕ್ಷಣದ ಮೂಲಕ ನಿಜವಾದ ಸಬಲೀಕರಣ ಆಬೇಕಾಗಿದೆ ಎಂದು ಪ್ರತಿಪಾದಿಸಿದರು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.