ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರದ ಅತ್ಯಂತ ಮಹತ್ವಾಕಾಂಕ್ಷೆಯ ಯೋಜನೆಗಳಲ್ಲಿ ಒಂದಾದ ‘ಪ್ರಧಾನ ಮಂತ್ರಿ ಸಹಜ್ ಬಿಜಲಿ ಹರ್ ಘರ್ ಯೋಜನಾ’ ಇಂದು ಮಹತ್ವದ ಮೈಲಿಗಲ್ಲನ್ನು ಸಾಧಿಸಿದೆ.
ಇನ್ನೂ ವಿದ್ಯುತ್ ಬೆಳಕು ಕಾಣದ ಪ್ರತಿ ಬಡವರ ಮನೆಗಳಿಗೆ ವಿದ್ಯುತ್ ಒದಗಿಸಬೇಕು ಎಂಬ ಮಹತ್ವಾಕಾಂಕ್ಷೆಯೊಂದಿಗೆ ಪ್ರಧಾನಿ ಮೋದಿಯವರು 2017ರ ಸೆಪ್ಟಂಬರ್ನಲ್ಲಿ ಈ ಯೋಜನೆಯನ್ನು ಘೋಷಣೆ ಮಾಡಿದ್ದರು. 2018ರ ಡಿಸೆಂಬರ್ನೊಳಗೆ ದೇಶದ ಪ್ರತಿ ಮನೆಯೂ ವಿದ್ಯುದೀಕರಣಗೊಂಡಿರಬೇಕು ಎಂಬುದು ಅವರ ಗುರಿಯಾಗಿತ್ತು.
ಅದರಂತೆ ಇಂದು ಸೌಭಾಗ್ಯ ಯೋಜನೆ ಮಹತ್ವದ ಮೈಲಿಗಲ್ಲನ್ನು ಸಾಧಿಸಿದ್ದು, ಬರೋಬ್ಬರಿ 2 ಕೋಟಿ ಮನೆಗಳಿಗೆ ಈ ಯೋಜನೆಯ ಮೂಲಕ ವಿದ್ಯುತ್ ಪೂರೈಕೆಯಾಗಿದೆ. ಸ್ವಾತಂತ್ರ್ಯ ಬಂದು ಇಷ್ಟು ವರ್ಷಗಳ ಬಳಿಕ ಇಂತಹದೊಂದು ಸಾಧನೆಯನ್ನು ನಮ್ಮ ದೇಶ ಕಾಣುತ್ತಿದೆ ಎಂಬುದು ಇಲ್ಲಿ ಉಲ್ಲೇಖಾರ್ಹ.
ಈ ಯೋಜನೆಯಡಿ ಬಡವರಿಗೆ ಉಚಿತವಾಗಿ 5 ಎಲ್ಇಡಿ ಪಾಯಿಂಟ್, 1 ಫ್ಯಾನ್ ಪಾಯಿಂಟ್, 1 ಪ್ಲಗ್ಗಳನ್ನು ಒದಗಿಸಲಾಗುತ್ತದೆ. ಇದಕ್ಕಾಗಿ ಸರ್ಕಾರ 16 ಸಾವಿರ ಕೋಟಿ ರೂಪಾಯಿಗಳನ್ನು ವ್ಯಯಿಸಿದೆ.
ಒಂದು ದಿನಕ್ಕೆ ಒಂದೂವರೆ ಲಕ್ಷ ಮನೆಗೆ ವಿದ್ಯುತ್ನ್ನು ಈ ಯೋಜನೆಯ ಮೂಲಕ ನೀಡಲಾಗುತ್ತಿದ್ದು, ಕೇಂದ್ರದ ಗುರಿಯಂತೆ ಡಿಸೆಂಬರ್ 31ರ ವೇಳೆಗೆ ಇನ್ನೂ ವಿದ್ಯುತ್ ಸಂಪರ್ಕ ಪಡೆಯದ 1 ಕೋಟಿ 4 ಲಕ್ಷ ಮನೆಗಳಿಗೆ ವಿದ್ಯುತ್ ಪೂರೈಕೆಯಾಗಲಿದೆ. ಆಗ ಇಡೀ ಭಾರತವೇ ಸಂಪೂರ್ಣ ವಿದ್ಯುದೀಕರಣಗೊಂಡ ದೇಶ ಎಂಬ ಹೆಗ್ಗಳಿಕೆಗೆ ಪಾತ್ರವಾಗಲಿದೆ. ಈಗಾಗಲೇ ಭಾರತದ ಗ್ರಾಮಗಳನ್ನು ಸಂಪೂರ್ಣ ವಿದ್ಯುದೀಕರಣಗೊಳಿಸಿರುವ ಮೋದಿ ಸರ್ಕಾರದ ಹಿರಿಮೆಗೆ ಇದು ಮತ್ತೊಂದು ಗರಿಯಾಗಲಿದೆ.
#Saubhagya has achieved another milestone of electrification of 2 crore households.@narendramodi @pmoindia @RajKSinghIndia @OfficeOfRKSingh @BhallaAjay26 @IFSGJ064 @MinOfPower @RameshPV2010 @tscbosh @KKMtweet pic.twitter.com/E8wqvQQGsK
— Saubhagya (@grameenvidyut) November 19, 2018
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.