ಬೆಂಗಳೂರು : ಹಾಲು ಕರೆಯುವ ಗೋವುಗಳಿಗೆ ಶೀಘ್ರದಲ್ಲೇ ಚಿಪ್ ಅಳವಡಿಸುವ ಕಾರ್ಯವನ್ನು ನಡೆಸಲಾಗುತ್ತಿದೆ ಎಂದು ಪಶು ಸಂಗೋಪನಾ ಸಚಿವ ವೆಂಕಟೇಶ್ ನಾಡಗೌಡ ಹೇಳಿದ್ದಾರೆ.
ರೋಗವನ್ನು ಪತ್ತೆ ಹಚ್ಚಲು ಮತ್ತು ಅಕ್ರಮ ಮಾರಾಟವನ್ನು ತಡೆಯುವುದಕ್ಕಾಗಿ ಹೊಸ ತಂತ್ರಜ್ಞಾನದಿಂದ ಅಭಿವೃದ್ಧಿಪಡಿಸಿದ ಚಿಪ್ಗಳನ್ನು ಹಾಲು ಕರೆಯುವ ಗೋವುಗಳಿಗೆ ಅಳವಡಿಸಲು ರಾಜ್ಯ ಸರ್ಕಾರ ನಿರ್ಧರಿಸಿದೆ ಎಂದಿದ್ದಾರೆ.
ಈ ಚಿಪ್ನಿಂದ ಗೋವುಗಳಿಗೆ ಸಾಮಾನ್ಯವಾಗಿ ಕಂಡು ಬರುವ ಕಾಲುಬಾಯಿ ರೋಗ ಸೇರಿದಂತೆ ಇನ್ನಿತರ ರೋಗಗಳನ್ನು ಆರಂಭಿಕ ಹಂತದಲ್ಲೇ ಪತ್ತೆ ಹಚ್ಚಲು ಸಹಾಯವಾಗಲಿದೆ. ಅಲ್ಲದೇ, ಚಿಪ್ ಅಳವಡಿಕೆಯಿಂದ ಅಕ್ರಮವಾಗಿ ನಡೆಯುವ ಹಸುಗಳ ಮಾರಾಟವನ್ನು ತಡೆಯಬಹುದಾಗಿದೆ. ಅವುಗಳು ಎಲ್ಲಿ, ಯಾರ ಬಳಿ ಇವೆ ಎಂಬುದನ್ನು ಚಿಪ್ ಮೂಲಕ ಪತ್ತೆ ಹಚ್ಚಬಹುದಾಗಿದೆ. ಪಶುಭಾಗ್ಯ ಯೋಜನೆಯು ದುರ್ಬಳಕೆಯಾಗುತ್ತಿದೆ ಎಂಬ ಆರೋಪದ ಹಿನ್ನೆಲೆಯಲ್ಲಿ ಈ ಕ್ರಮ ಕೈಗೊಳ್ಳಲಾಗಿದೆ ಎಂದು ಸಚಿವರು ಹೇಳಿದ್ದಾರೆ.
ರಾಜ್ಯದಲ್ಲಿ 71 ಲಕ್ಷ ಹಾಲು ಕರೆಯುವ ಹಸುಗಳಿದ್ದು, ಈಗಾಗಲೇ 56 ಲಕ್ಷದಷು ಹಸುಗಳಿಗೆ ಚಿಪ್ಗಳನ್ನು ಅಳವಡಿಕೆ ಮಾಡಲಾಗಿದೆ. ಪ್ರತಿ ಚಿಪ್ಗೆ ರೂ.6.20 ವೆಚ್ಚವಾಗಲಿದೆ. ಶೀಘ್ರದಲ್ಲಿಯೇ ಎಲ್ಲಾ ಹಾಲು ಕರೆಯುವ ಹಸುಗಳಿಗೂ ಅಳವಡಿಕೆ ಮಾಡಲಾಗುವುದು ಎಂದು ಹೇಳಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.