ಬೆಂಗಳೂರು: ರಾಜ್ಯ ರಾಜಧಾನಿ ಬೆಂಗಳೂರಿನ ಪ್ರಮುಖ ಎರಡು ರೈಲು ನಿಲ್ದಾಣಗಳಲ್ಲಿ ಶೀಘ್ರದಲ್ಲೇ ಬೃಹತ್ ರಾಷ್ಟ್ರಧ್ವಜಗಳು ಹಾರಾಡಲಿವೆ.
ರಾಷ್ಟ್ರೀಯತೆಯ ಹೆಮ್ಮೆಯಾಗಿರುವ ರಾಷ್ಟ್ರಧ್ವಜವನ್ನು ಸಾರ್ವಜನಿಕ ಸ್ಥಳಗಳಲ್ಲಿ ಹಾರಿಸುವ ಕೇಂದ್ರ ಸರ್ಕಾರ ಆಶಯದ ಭಾಗವಾಗಿ ದೇಶದ 75 ರೈಲು ನಿಲ್ದಾಣಗಳಲ್ಲಿ ಬೃಹತ್ ರಾಷ್ಟ್ರಧ್ವಜಗಳು ಹಾರಾಟ ನಡೆಸಲಿವೆ.
ಹೆಚ್ಚು ಆದಾಯ ಗಳಿಸುತ್ತಿರುವ ಎ ದರ್ಜೆಯ ರೈಲು ನಿಲ್ದಾಣಗಳನ್ನು ರಾಷ್ಟ್ರಧ್ವಜ ಹಾರಿಸುವಿಕೆಗೆ ಆಯ್ಕೆ ಮಾಡಲಾಗಿದೆ.
ಬೆಂಗಳೂರಿನ ಯಶವಂತಪುರ ಮತ್ತು ಸಂಗೊಳ್ಳಿ ರಾಯಣ್ಣ ರೈಲು ನಿಲ್ದಾಣ ಇದಕ್ಕಾಗಿ ಆಯ್ಕೆಯಾಗಿದೆ. ವರ್ಷಾಂತ್ಯಕ್ಕೆ ಇಲ್ಲಿ ಬೃಹತ್ ರಾಷ್ಟ್ರಧ್ವಜಗಳು ಹಾರಲಿವೆ. ಇದು ಸುಮಾರು 100 ಅಡಿ ಎತ್ತರವಿರಲಿದೆ ಎನ್ನಲಾಗಿದೆ.
ಸಾರ್ವಜನಿಕರ ರಾಷ್ಟ್ರ ಭಕ್ತಿಯನ್ನು ಉದ್ದೀಪಣಗೊಳಿಸುವ ಸಲುವಾಗಿ ಕೇಂದ್ರ ಸರ್ಕಾರ ಈ ನಿರ್ಧಾರವನ್ನು ತೆಗೆದುಕೊಂಡಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.