ನವದೆಹಲಿ: ಆಧುನೀಕರಣದ ಹಾದಿಯಲ್ಲಿ ಭಾರತೀಯ ರೈಲ್ವೇಯು ಅತೀ ವೇಗದಲ್ಲಿ ಚಲಿಸುತ್ತಿದೆ. ಇದೀಗದ ಬೆಳವಣಿಗೆಯಲ್ಲಿ, ಕೇಂದ್ರೀಯ ರೈಲ್ವೇಯು ತನ್ನ 6 ರೈಲುಗಳನ್ನು ‘ಉತ್ಕೃಷ್ಟ’ ರೇಕ್ಗೆ ಪರಿವರ್ತಿಸಲು ನಿರ್ಧರಿಸಿದೆ.
‘6 ರೈಲುಗಳು 11 ರೇಕ್ಗಳು ಆಧುನೀಕರಣಗೊಳ್ಳಲಿದ್ದು, ಉತ್ಕೃಷ್ಟ ರೇಕ್ಗಳಾಗಿ ಪರಿವರ್ತನೆಗೊಳ್ಳಲಿದೆ. ಇನ್ನು ಎರಡೂವರೆ ತಿಂಗಳಲ್ಲಿ ಈ ಕಾರ್ಯ ಪೂರ್ಣಗೊಳ್ಳಲಿದೆ’ ಎಂದು ಸೆಂಟ್ರಲ್ ರೈಲ್ವೇ ಸಿಪಿಆರ್ಓ ಸುನೀಲ್ ಉದಾಸಿ ಹೇಳಿದ್ದಾರೆ.
ಈಗಾಗಲೇ ಸೆಂಟ್ರಲ್ ರೈಲ್ವೇ ವಿಭಿನ್ನ ಪೋಸ್ಟರ್ನ್ನು ಅನಾವರಣಗೊಳಿಸಿದ್ದು, ಈ ಕೋಚ್ಗಳ ಬಗೆಗಿನ ವಿವರಗಳನ್ನು ಇದು ಒಳಗೊಂಡಿದೆ. ಪ್ರಯಾಣಿಕರಿಗೆ ಗೊಂದಲವಾಗಬಾರದು ಎಂಬ ಕಾರಣಕ್ಕೆ ಈ ಪೋಸ್ಟರ್ ಹೊರತರಲಾಗಿದೆ.
ನ.೪ರಂದು ಮುಂಬಯಿ-ಪುಣೆ ನಡುವೆ ಸಂಚರಿಸುವ ಪ್ರಗತಿ ಎಕ್ಸ್ಪ್ರೆಸ್ನಲ್ಲಿ ಮೊದಲ ಬಾರಿಗೆ ‘ಉತ್ಕೃಷ್ಟ ರೇಕ್’ಗಳನ್ನು ಪರಿಚಯಿಸಲಾಗಿದೆ. ಇದರಲ್ಲಿ ಬ್ರೈಲ್ ಸ್ಟಿಕ್ಕರ್ಗಳು, ಸೆರಾಮಿಕ್ ಟೈಲ್ಡ್ ವಾಷ್ ರೂಮ್ಗಳು, ಆಧುನಿಕ ಟಾಯ್ಲೆಟ್ ಸವಲತ್ತುಗಳು ಮತ್ತು ವಾಶ್ರೂಮ್ಗಳಲ್ಲಿ ಕಸ್ಟಮ್ ವಿನ್ಯಾಸದ ವಿಂಡೋ ವಿಂಟಿಲೇಟರ್ಗಳನ್ನು ಅಳವಡಿಸಲಾಗಿದೆ. ಇನ್ನೂ ಸಾಕಷ್ಟು ಆಧುನಿಕ ಸೌಕರ್ಯಗಳಿವೆ.
source: zeenews
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.