ಬೆಂಗಳೂರು: ಬೆಂಗಳೂರು ನಗರದ ಅತ್ಯಂತ ಪ್ರಸಿದ್ಧ ಕಬ್ಬನ್ ಪಾರ್ಕ್ನಲ್ಲಿರುವ ಬ್ಯಾಂಡ್ಸ್ಟ್ಯಾಂಡ್ ಶೀಘ್ರದಲ್ಲೇ ಪಾರಂಪರಿಕ ರಚನೆ ಎಂಬ ಹೆಗ್ಗಳಿಕೆಗೆ ಪಾತ್ರವಾಗಲಿದೆ. ಈ ಬ್ಯಾಂಡ್ಸ್ಟ್ಯಾಂಡ್ ಅಲಂಕಾರಿಕ ಕಬ್ಬಿನದ ರಚನೆಯಾಗಿದ್ದು, 8 ಕಂಬಗಳನ್ನು ಹೊಂದಿದೆ. ಹಲವಾರು ಸಾಂಸ್ಕೃತಿಕ ಕಾರ್ಯಕ್ರಮಗಳು ಇಲ್ಲಿ ಜರಗುತ್ತವೆ.
ಪಾರ್ಕ್ನ ಉಸ್ತುವಾರಿ ನೋಡಿಕೊಳ್ಳುತ್ತಿರುವ ತೋಟಗಾರಿಕ ಇಲಾಖೆ, ಬ್ಯಾಂಡ್ಸ್ಟ್ಯಾಂಡ್ಗೆ ‘ಪಾರಂಪರಿಕ ರಚನೆ’ ಎಂಬ ಸ್ಥಾನಮಾನ ನೀಡುವಂತೆ ಕೋರಿ ಶೀಘ್ರದಲ್ಲೇ ಪುರಾತತ್ವ ಇಲಾಖೆಗೆ ಪತ್ರ ಬರೆಯಲಿದೆ. 2018ಕ್ಕೆ ಪಾರ್ಕ್ ಶತಮಾನೋತ್ಸವವನ್ನು ಪೂರ್ಣಗೊಳಿಸಿದ ಹಿನ್ನಲೆಯಲ್ಲಿ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ.
1918ರ ಮಾರ್ಚ್ 14ರಂದು ಈ ಬ್ಯಾಂಡ್ಸ್ಟ್ಯಾಂಡ್ ಉದ್ಘಾಟನೆಗೊಂಡಿತ್ತು. ಮೈಸೂರು ಮಹಾರಾಜರ ಇನ್ಫಾಂಟ್ರಿ ಬ್ಯಾಂಡ್ ಇಲ್ಲಿ ಮೊದಲ ಪ್ರದರ್ಶನವನ್ನು ನೀಡಿತ್ತು.
ಈ ಬ್ಯಾಂಡ್ಸ್ಟ್ಯಾಂಡ್ಗೆ ಪಾರಂಪರಿಕ ಸ್ಥಾನಮಾನ ಸಿಗುವುದರಿಂದ ಅದರ ಸಂರಕ್ಷಣೆ ಆಗುತ್ತದೆ ಮತ್ತು ಪ್ರವಾಸಿಗರೂ ಇತ್ತ ಆಕರ್ಷಿತಗೊಳ್ಳುತ್ತಾರೆ. ಈ ಕಾರಣಕ್ಕಾಗಿ ನಾವು ಪತ್ರವನ್ನು ಬರೆಯುತ್ತಿದ್ದೇವೆ ಎಂದು ಕಬ್ಬನ್ ಪಾರ್ಕ್ ಉಪ ನಿರ್ದೇಶಕ ಮಹಂತೇಶ್ ಮುರ್ಗೊಡು ಹೇಳಿದ್ದಾರೆ.
source: timesnow
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.