ಬೆಂಗಳೂರು: ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ರಾಜ್ಯಪಾಲ ವಜುಭಾಯಿ ವಾಲಾ ಅವರನ್ನು ಭೇಟಿಯಾಗಿದ್ದು, ಆರು ವಿವಿ ಕುಲಪತಿಗಳ ಪಟ್ಟಿಗೆ ರಾಜ್ಯಪಾಲು ಅಸ್ತು ನೀಡಿದರು.
ಆದರೆ ಒಂದಂಕಿ ಲಾಟರಿಯಲ್ಲಿ ಪೊಲೀಸ್ ಅಧಿಕಾರಿಗಳೂ ಶಾಮೀಲಾಗಿರುವ ಆರೋಪ ಮತ್ತು ಕಬ್ಬು ಬೆಳೆಗಾರರ ಸಮಸ್ಯೆ ಬಗೆಹರಿಸುವಲ್ಲಿ ಸರಕಾರದ ವೈಫಲ್ಯದ ಕುರಿತು ವಾಲಾ ಅವರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಯುಜಿಸಿ ನಿಯಮಗಳ ಅನುಸಾರ ಕರ್ನಾಟಕ ವಿ.ವಿ. ಕಾಯಿದೆ೨೦೦೦ ಆಧರಿಸಿ ಕುಲಪತಿಗಳ ಹೆಸರು ಶಿಫಾರಸು ಮಾಡಲಾಗುವುದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದ್ದಾರೆ. ಸಕ್ಕರೆ ಬೆಲೆ ಕುಸಿತದಿಂದಾಗಿ ಕಾರ್ಖಾನೆ ಮಾಲೀಕರು ನಿಗದಿತ ಬೆಲೆ ಕೊಡಲು ಸಾಧ್ಯವಾಗದೇ ಹಿಂದೇಟು ಹಾಕುತ್ತಿದ್ದರೆ. ಆದರೆ ಕಬ್ಬು ಬೆಳೆಗಾರರಿಗೆ ಕಾನೂನಿನ್ವಯ ನ್ಯಾಯ ಒದಗಿಸುವುದಾಗಿ ಅವರು ಹೇಳಿದರು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.