ನವದೆಹಲಿ: ಗೋವು ಸಂರಕ್ಷಣೆಯ ಬಗ್ಗೆ ಜಾಗೃತಿಯನ್ನು ಮೂಡಿಸುವ ಸಲುವಾಗಿ ಗೋಸೇವಾ ಪರಿವಾರ್ ಎಂಬ ಸಂಸ್ಥೆಯೊಂದು ಸೆಲ್ಫಿ ವಿದ್ ಕೌನ್ನು ಆರಂಭಿಸಿದೆ. ಕಳೆದ ವರ್ಷವೂ ಈ ಸಂಸ್ಥೆ ಗೋವುಗಳೊಂದಿಗಿನ ಸೆಲ್ಫಿ ಅಭಿಯಾನವನ್ನು ಆರಂಭಿಸಿ ಭಾರೀ ಯಶಸ್ಸು ಕಂಡಿತ್ತು. ಇದೀಗ ಈ ವರ್ಷವೂ ಅದನ್ನು ಪುನರಾರಂಭಿಸಿದೆ.
ಗೋವು ಸಂರಕ್ಷಣೆಯಿಂದಾಗುವ ಪ್ರಯೋಜನಗಳನ್ನು, ಅದರ ಅಗತ್ಯತೆಯನ್ನು ಜನರಿಗೆ ತಿಳಿಸಿಕೊಡವ ಸಲುವಾಗಿ ಗೋಸೇವಾ ಪರಿವಾರ್ ಈ ಅಭಿಯಾನವನ್ನು ಆರಂಭ ಮಾಡಿದೆ.
ಗೋವುಗಳೊಂದಿಗೆ ಕ್ಲಿಕ್ಕಿಸಿದ ಸೆಲ್ಫಿಗಳನ್ನು ಫೇಸ್ಬುಕ್, ವಾಟ್ಸಾಪ್, ಟ್ವಿಟರ್, ಇನ್ಸ್ಟಾಗ್ರಾಮ್ಗಳಿಗೆ ಕಳುಹಿಸಿಕೊಡುವಂತೆ ಸಂಸ್ಥೆ ಮನವಿ ಮಾಡಿಕೊಂಡಿದೆ.
ರಾಸಾಯನಿಕ ಗೊಬ್ಬರಗಳ ಬದಲಿಗೆ ಗೋವಿನ ಮಲ, ಮೂತ್ರದಿಂದ ಉತ್ಪತ್ತಿಯಾಗುವ ಗೊಬ್ಬರದಿಂದ ಆಗುವ ಪ್ರಯೋಜನಗಳನ್ನು ಈ ಮೂಲಕ ಸಂಸ್ಥೆ ಜನರಿಗೆ ತಿಳಿಸುತ್ತಿದೆ.
source: DNA
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.