ನವದೆಹಲಿ: ನೋಟ್ ಬ್ಯಾನ್ ಆಗಿ ಎರಡು ವರ್ಷಗಳು ಕಳೆದರೂ ನರೇಂದ್ರ ಮೋದಿ ಸರ್ಕಾರವನ್ನು ಟೀಕಿಸಲು ಇಂದಿಗೂ ಅದನ್ನು ಕಾಂಗ್ರೆಸ್ ಅಸ್ತ್ರವನ್ನಾಗಿಸಿಕೊಂಡಿದೆ.
ಚುನಾವಣಾ ಅಖಾಡ ಛತ್ತೀಸ್ಗಢದಲ್ಲಿ ಸಮಾವೇಶ ನಡೆಸಿದ್ದ ರಾಹುಲ್ ಗಾಂಧಿಯವರು, ನೋಟ್ ಬ್ಯಾನ್ ವೇಳೆ ಕಪ್ಪು ಹಣ ಹೊಂದಿದ್ದ ಶ್ರೀಮಂತ ವ್ಯಕ್ತಿ ತನ್ನ ಕಾರಿನಿಂದ ಇಳಿದು ಎಟಿಎಂ ಮುಂದೆ ಕ್ಯೂ ನಿಂತಿದ್ದನ್ನು ನೋಡಿದ್ದೀರಾ ಎಂದು ಜನರನ್ನು ಪ್ರಶ್ನಿಸಿದ್ದರು.
ಇದಕ್ಕೆ ಪ್ರತ್ಯುತ್ತರ ನೀಡಿರುವ ಬಿಜೆಪಿ ವಕ್ತಾರ ಸಂಬೀತ್ ಪಾತ್ರ, ‘ಹೌದು ನೋಡಿದ್ದೇವೆ, ರಾಹುಲ್ ಗಾಂಧಿಯವರು ತಮ್ಮ 4 ಕೋಟಿ ರೂಪಾಯಿ ಬೆಲೆಯ ಕಾರಿನಿಂದ ಇಳಿದು ಎಟಿಎಂ ಮುಂದೆ ಕ್ಯೂ ನಿಂತಿದ್ದನ್ನು ನಾವು ನೋಡಿದ್ದೇವೆ’ ಎಂದಿದ್ದಾರೆ.
ಎರಡು ವರ್ಷಗಳ ಬಳಿಕವೂ ನೋಟ್ ಬ್ಯಾನ್ ಬಗ್ಗೆ ಕಾಂಗ್ರೆಸ್ ಟೀಕೆಯನ್ನು ಮುಂದುವರೆಸಿದೆ. ನೋಟ್ ಬ್ಯಾನ್ ಆದ ಬಳಿಕ ದೇಶದಲ್ಲಿ ನಕ್ಸಲಿಸಂ ಸಾಕಷ್ಟು ಕಡಿಮೆಯಾಗಿದೆ ಎಂಬುದು ಅವರಿಗಿನ್ನೂ ತಿಳಿದಿಲ್ಲ ಎಂದಿದ್ದಾರೆ.
source: www.india.com
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.