ನವದೆಹಲಿ: ಭಾರತೀಯ ಸೇನೆ ಇಂದು ಕೆ9 ವಜ್ರ ಮತ್ತು ಎಂ777 ಹೌವಿಟ್ಜರ್ ಗನ್ ಸಿಸ್ಟಮ್ಗಳನ್ನು ಮಹಾರಾಷ್ಟ್ರದ ದೇವ್ಲಾಲಿಯಲ್ಲಿ ಅಧಿಕೃತವಾಗಿ ತನ್ನ ಪಡೆಗೆ ಸೇರ್ಪಡೆಗೊಳಿಸಲಿದೆ.
ಸೇರ್ಪಡೆ ಕಾರ್ಯಕ್ರಮದಲ್ಲಿ ರಕ್ಷಣಾ ಸಚಿವೆ ನಿರ್ಮಲಾ ಸೀತಾರಾಮನ್, ಸೇನಾ ಮುಖ್ಯಸ್ಥ ಬಿಪಿನ್ ರಾವತ್, ಸಚಿವ ಸುಭಾಷ್ ಭಮ್ರೆ ಭಾಗವಹಿಸಲಿದ್ದಾರೆ.
ಈ ಬಗ್ಗೆ ಟ್ವಿಟ್ ಮಾಡಿರುವ ರಕ್ಷಣಾ ಸಚಿವೆ, ‘K9 ವಜ್ರ ಮತ್ತು 155 ಎಂಎಂ M777 A2 ಅಲ್ಟ್ರಾ ಲೈಟ್ ಹೌವಟ್ಜರ್ನ್ನು ಶುಕ್ರವಾರ ಸೇನೆಗೆ ಸೇರ್ಪಡೆಗೊಳಿಸಲಾಗುತ್ತದೆ. ಈ ಮಧ್ಯಮ ಗನ್ನ್ನು ಗುಡ್ಡಗಾಡಿಗೂ ಸುಲಭವಾಗಿ ತೆಗೆದುಕೊಂಡು ಹೋಗಬಹುದಾಗಿದೆ.
ಅಲ್ಲದೇ ಶತ್ರುಗಳನ್ನು ಈ ಗನ್ ಸಿಸ್ಟಮ್ ಗುಡ್ಡಗಾಡು ಪ್ರದೇಶದಲ್ಲೂ ಸುಲಭವಾಗಿ ಟಾರ್ಗೆಟ್ ಮಾಡಬಲ್ಲದು.
source: zeenews
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.