ಮುಂಬಯಿ: ಐಪಿಎಲ್ ಮಾಜಿ ಮುಖ್ಯಸ್ಥ ಲಲಿತ್ ಮೋದಿಯವರಿಗೆ ವೀಸಾ ನೀಡಲು ಸಹಕರಿಸಿದ ಆರೋಪ ಹೊತ್ತಿರುವ ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್ ಅವರ ವಿರುದ್ಧ ಪ್ರತಿಪಕ್ಷಗಳು ಪ್ರತಿಭಟನೆಯನ್ನು ತೀವ್ರಗೊಳಿಸಿದ್ದು, ಅವರ ರಾಜೀನಾಮೆಗೆ ಬಿಗಿಪಟ್ಟು ಹಿಡಿದಿವೆ.
ಇನ್ನೊಂದೆಡೆ ಲಲಿತ್ ವಕೀಲ ಮೆಹಮೂದ್ ಎಂ ಅಬ್ದಿ ಅವರು ಯುಪಿಎ ವಿರುದ್ಧ ಹರಿಹಾಯ್ದಿದ್ದು, ಆಗಿನ ಸಚಿವರುಗಳಾದ ಚಿದಂಬರಂ, ಶಶಿ ತರೂರ್ ಮತ್ತು ಸಲ್ಮಾನ್ ಖುರ್ಷಿದ್ ಅವರು ಕಾನೂನು ಪ್ರಕ್ರಿಯೆಯಲ್ಲಿ ಮಧ್ಯಪ್ರವೇಶ ಮಾಡುವ ಮೂಲಕ ಲಲಿತ್ ಮೋದಿ ಲಂಡನ್ನಲ್ಲಿ ನೆಲೆಸದಂತೆ ಮಾಡಲು ಶತಪ್ರಯತ್ನ ಪಟ್ಟಿದ್ದರು ಎಂದು ಆರೋಪಿಸಿದ್ದಾರೆ.
ಈ ಎಲ್ಲಾ ಘಟನೆ ರಾಜಕೀಯ ಪ್ರೇರಿತವಾಗಿದ್ದು, ಸುಷ್ಮಾ ಸ್ವರಾಜ್ ಅವರನ್ನು ಸಿಲುಕಿಸಲು ತಂತ್ರ ರೂಪಿಸಲಾಗಿದೆ, ಇದುವರೆಗೆ ಹಗರಣಗಳಿಂದ ಮುಕ್ತವಾಗಿರುವ ನರೇಂದ್ರ ಮೋದಿ ಸರ್ಕಾರವನ್ನು ಅಸ್ಥಿರಗೊಳಿಸುವ ಪ್ರಯತ್ನ ಮಾಡಲಾಗುತ್ತಿದೆ ಎಂದು ಮೆಹಮೂದ್ ಆರೋಪಿಸಿದ್ದಾರೆ.
ಯುಪಿಎ ಅವಧೀಯಲ್ಲೇ ಲಲಿತ್ ಮೊದಿಯವರ ವೀಸಾ ಪ್ರಕರಣದ ಬಗ್ಗೆ ವಾದ ಮಂಡಿಸಲಾಗಿದ್ದು, ಸರ್ಕಾರ ಬದಲಾದ ಬಳಿಕ ಅದರ ತೀರ್ಪು ಬಂತು, ಅವರ ವಿರುದ್ಧ ಬ್ಲೂ ಕಾರ್ನರ್ ನೋಟಿಸ್ ಜಾರಿಗೊಳಿಸಲಾಗಿಲ್ಲ, ಅವರು ಅಪರಾಧಿ ಎಂಬುದು ಇದುವರೆಗೆ ಸಾಬೀತಾಗಿಲ್ಲ ಎಂದು ಅವರು ಸ್ಪಷ್ಟಪಡಿಸಿದ್ದಾರೆ.
ಒಟ್ಟಿನಲ್ಲಿ ಮೋದಿ ಪ್ರಕರಣ ರಾಜಕೀಯ ವಲಯದಲ್ಲಿ ಬಿರುಗಾಳಿಯನ್ನೇ ಸೃಷ್ಟಿಸಿದ್ದು, ಬಿಜೆಪಿ ಮತ್ತು ಕಾಂಗ್ರೆಸ್ ನಡುವಣ ಜಟಾಪಟಿಗೆ ಕಾರಣವಾಗಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.