ಹರಿದ್ವಾರ: ಯೋಗ ಗುರು ಬಾಬಾ ರಾಮ್ದೇವ್ ಅವರ ಹರಿದ್ವಾರದಲ್ಲಿನ ಪತಂಜಲಿ ಯೋಗಪೀಠದಲ್ಲಿ ನಿರ್ಮಿಸಲಾದ ‘ಆಚಾರ್ಯಕುಲಂ’ನ್ನು ಸೋಮವಾರ ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಷಾ ಅವರು ಉದ್ಘಾಟಿಸಿದರು.
ಇಂಗ್ಲೀಷ್ ಮತ್ತು ಆಧುನಿಕ ಶಿಕ್ಷಣದ ಜೊತೆ ಜೊತೆಗೆ ವೇದಗಳ ಶಿಕ್ಷಣವನ್ನು ನೀಡುವುದು ಆಚಾರ್ಯಕುಲಂನ ಮುಖ್ಯ ಉದ್ದೇಶವಾಗಿದೆ. ಭಾರತದ ಸನಾತನ ಶಿಕ್ಷಣ ಮತ್ತು ಆಧುನಿಕ ಸ್ಪರ್ಧಾತ್ಮಕ ಶಿಕ್ಷಣ ಎರಡೂ ವಿದ್ಯಾರ್ಥಿಗಳಿಗೆ ಇಲ್ಲಿ ಸಿಗಲಿದೆ.
‘ಬಾಬಾ ರಾಮ್ದೇವ್ ಅವರು ಪರ್ಯಾಯ ಶಿಕ್ಷಣದ ಮೂಲಕ, ಮೆಕಾಲೆಯ ಶಿಕ್ಷಣ ಪದ್ಧತಿಯಿಂದ ಸ್ವಾತಂತ್ರ್ಯ ಪಡೆಯುವ ಹಾದಿಯನ್ನು ತೋರಿಸಿಕೊಟ್ಟಿದ್ದಾರೆ’ ಎಂದು ಅಮಿತ್ ಷಾ ಬಣ್ಣಿಸಿದ್ದಾರೆ.
ದೇಶಕ್ಕೆ ಪರ್ಯಾಯ ಶಿಕ್ಷಣ ನೀಡುವಲ್ಲಿ ಶ್ರಮಿಸುತ್ತಿರುವ ಪತಂಜಲಿ ಯೋಗಪೀಠಕ್ಕೆ ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಸಂಪೂರ್ಣ ಸಹಕಾರ ದೊರೆಯಲಿದೆ ಎಂದು ಅವರು ಭರವಸೆ ನೀಡಿದ್ದಾರೆ.
source: newsbharati
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.