ನವದೆಹಲಿ: ಏರ್ಪೋರ್ಟ್ನಲ್ಲಿ ನಡೆಯುವ ಚೆಕ್ ಇನ್ ಪ್ರಕ್ರಿಯೆಗಳನ್ನು ಪೂರ್ಣಗೊಳಿಸಲು ಸಹಾಯ ಮಾಡುವ ಅಸಿಸ್ಟೆಂಟ್ಗಳನ್ನು ಬಳಸಿಕೊಳ್ಳುವ ಪ್ಯಾಕೇಜ್ ಇನ್ನು ಮುಂದೆ ವಾಯು ಪ್ರಯಾಣಿಕರು ಸಿಗಲಿದೆ.
ಈ ಅಸಿಸ್ಟೆಂಟ್ಗಳು ಸೆಕ್ಯೂರಿಟಿ ಚೆಕ್, ಇಮಿಗ್ರೇಶನ್ ಚೆಕ್, ಏರ್ಲೈನ್ ಲಾಂಜ್ನಲ್ಲಿ ಕಾಯುವಿಕೆ, ಬೋರ್ಡಿಂಗ್ ಗೇಟ್ಗೆ ಕರೆದೊಯ್ಯವಿಕೆ ಮುಂತಾದ ವಿಷಯಗಳಲ್ಲಿ ಪ್ರಯಾಣಿಕರಿಗೆ ಸಹಾಯ ಮಾಡಲಿದ್ದಾರೆ.
‘ಮೀಟ್ ಆಂಡ್ ಗ್ರೀಟ್’ ಎಂಬ ಹೆಸರಿನಡಿ ನಾಗರಿಕ ವಿಮಾನಯಾನ ಯೋಜನೆ ಈ ಯೋಜನೆಯನ್ನು ಅನುಷ್ಠಾನಕ್ಕೆ ತರಲು ಯೋಜಿಸಿದೆ. ಈ ಯೋಜನೆಯಡಿ ದೇಶದಾದ್ಯಂತ ಏರ್ಪೋರ್ಟ್ಗಳು ಪ್ರಯಾಣಿಕರನ್ನು ಉಪಚರಿಸಲು ಸಂಸ್ಥೆಗಳನ್ನು ನಿಯುಕ್ತಿಗೊಳಿಸಲಿದೆ.
ಮೂಲಗಳ ಪ್ರಕಾರ, ಈ ಸೇವೆ ಪಡೆಯಬಯಸುವ ಪ್ರಯಾಣಿಕ ಹೆಚ್ಚುವರಿಯಾಗಿ ರೂ.5000ದವರೆಗೆ ಪಾವತಿಸಬೇಕಾಗುತ್ತದೆ. ಪಾರ್ಕಿಂಗ್ ಏರಿಯಾದಲ್ಲಿ ಅಸಿಸ್ಟೆಂಟ್ಗಳು ಇವರನ್ನು ಸ್ವಾಗತಿಸಿ ವಿಮಾನ ಹತ್ತುವವರೆಗಿನ ಅವರ ಎಲ್ಲಾ ಕಾರ್ಯಗಳನ್ನು ನೋಡಿಕೊಳ್ಳಲಿದ್ದಾರೆ.
source; HINDUSTAN TIMES
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.