ನವದೆಹಲಿ: ಭಾರತೀಯ ನೌಕಾಪಡೆಯ ದೀರ್ಘ ವ್ಯಾಪ್ತಿಯ ಸಮುದ್ರ ವಿಚಕ್ಷಣ ಜಲಾಂತರ್ಗಾಮಿ ವಿರೋಧಿ ಯುದ್ಧ ವಿಮಾನ (Long Range Maritime Reconnaissance Anti Submarine Warfare aircraft ) ಬೋಯಿಂಗ್ ಪಿ-8i (Boeing P-8i) ಕಾರ್ ನಿಕೋಬರ್ನಲ್ಲಿ ತನ್ನ ಮೊತ್ತ ಮೊದಲ ಲ್ಯಾಂಡಿಂಗ್ನ್ನು ಕಂಡಿದೆ.
ಭಾರತೀಯ ಹಿಂದೂ ಮಹಾಸಾಗರದಲ್ಲಿ ಚೀನಾ ಜಲಾಂತಗಾರ್ಮಿಗಳ ಚಲನವಲನ ಹೆಚ್ಚುತ್ತಿರುವ ಹಿನ್ನಲೆಯಲ್ಲಿ ಬೋಯಿಂಗ್ ಪಿ-8iನ ಲ್ಯಾಂಡಿಂಗ್ ಮಹತ್ವ ಪಡೆದುಕೊಂಡಿದೆ.
ಈ ಬಗ್ಗೆ ಟ್ವಿಟ್ ಮಾಡಿರುವ ನೌಕದಳ, ‘ಬೋಯಿಂಗ್ ಪಿ-8i ಅಂಡಮಾನ್ ಮತ್ತು ನಿಕೋಬರ್ ಐಸ್ಲ್ಯಾಂಡ್ ಏರ್ಪೋರ್ಟ್ ಕಾರ್ ನಿಕೋಬರ್ನಲ್ಲಿ ಮೊದಲ ಲ್ಯಾಂಡಿಂಗ್ ಕಂಡಿದೆ. ಇದರಿಂದ ಹಿಂದೂ ಮಹಾಸಾಗರದಲ್ಲಿನ ನಮ್ಮ ಜವಾಬ್ದಾರಿಯುತ ಕಾರ್ಯಾಚರಣೆಯ ಶ್ರೀಮಂತಿಕೆ ಮತ್ತು ನಮ್ಯತೆಯನ್ನು ಹೆಚ್ಚಿಸಲಿದೆ’ ಎಂದಿದೆ.
ಒಂದು ವೇಳೆ ಅಂಡಮಾನ್ ಐಸ್ಲ್ಯಾಂಡ್ ಏರ್ಪೋರ್ಟ್ ಕಾರ್ಯಾಚರಣೆಯಲ್ಲಿ ಇಲ್ಲದಿದ್ದರೂ, ಈ ಏರ್ಕ್ರಾಫ್ಟ್ ಕಾರ್ ನಿಕೋಬಲ್ನಲ್ಲಿ ಲ್ಯಾಂಡ್ ಆಗಬಹುದಾಗಿದೆ. ಇಲ್ಲಿಂದ ಕಾರ್ಯಾಚರಣೆ ಆರಂಭಿಸಬಹುದಾಗಿದೆ.
source: NDTV
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.