ಶ್ರೀನಗರ: ಉತ್ತರ ಕಾಶ್ಮೀರದ ಸೊಪೋರ ನಗರದಲ್ಲಿ ಸೋಮವಾರ ಮುಂಜಾನೆ ಉಗ್ರಗಾಮಿಗಳು ಮಾಜಿ ಭಯೋತ್ಪಾದಕನೊಬ್ಬನನ್ನು ಗುಂಡಿಕ್ಕಿ ಹತ್ಯೆ ಮಾಡಿದ್ದಾರೆ, ಕಳೆದ 7 ದಿನಗಳಿಂದ ನಡೆಯುತ್ತಿರುವ ನಾಲ್ಕನೇ ದಾಳಿ ಇದಾಗಿದೆ.
ಮಾಜಿ ಉಗ್ರನಾಗಿದ್ದ ಅಜೀಝ್ ಅಹ್ಮದ್ ರೆಶಿಯನ್ನು ಸೊಪೋರದ ಮಂಡ್ಜಿಯಲ್ಲಿನ ಆತನ ನಿವಾಸದ ಹೊರಗಡೆ ಅಪರಿಚಿತ ಶಸ್ತ್ರಧಾರಿಗಳು ಗುಂಡಿಕ್ಕಿ ಕೊಂದು ಹಾಕಿದ್ದಾರೆ. ಈತನ ಹತ್ಯೆಯ ಹೊಣೆಯನ್ನು ಯಾವುದೇ ಉಗ್ರ ಸಂಘಟನೆಗಳು ಇದುವರೆಗೆ ಹೊತ್ತುಕೊಂಡಿಲ್ಲ.
ಭಾನುವಾರ ಕೂಡ ಉಗ್ರರು ಸೊಪೋರದಲ್ಲಿ ಅಂಗಡಿ ಮಾಲೀಕನೊಬ್ಬನನ್ನು ಕೊಂದು ಹಾಕಿದ್ದರು, ಶುಕ್ರವಾರ ಸರ್ಕಾರಿ ಉದ್ಯೋಗಿಯೊಬ್ಬನನ್ನು, ಮಂಗಳವಾರ ತೆಹ್ರೀಕ್ ಇ ಹುರಿಯತ್ ಕಾರ್ಯಕರ್ತನೊಬ್ಬನನ್ನು ಕೊಲೆ ಮಾಡಲಾಗಿತ್ತು.
ಉಗ್ರ ದಾರಿಯನ್ನು ಬಿಟ್ಟವರನ್ನು ಕೂಡ ಗುರಿಯಾಗಿರಿಸಿಕೊಂಡು ಉಗ್ರರು ದಾಳಿಗಳನ್ನು ನಡೆಸುತ್ತಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.