ಸಾರ್ವಜನಿಕ ಜೀವನದಲ್ಲಿ ಪಾರದರ್ಶಕತೆಯನ್ನು ಉತ್ತೇಜಿಸುವುದಕ್ಕಾಗಿ ಬಿಜೆಪಿ ಆರಂಭಿಸಿದ ಅಭಿಯಾನಕ್ಕೆ ಅಮಿತ್ ಷಾ ನಮೋ ಆ್ಯಪ್ ಮೂಲಕ 1 ಸಾವಿರ ರೂ. ದೇಣಿಗೆ ನೀಡಿದ್ದಾರೆ. ಕಾರ್ಯಕರ್ತರಿಗೂ ದೇಣಿಗೆ ಮಾಡುವಂತೆ ಹುರಿದುಂಬಿಸಿದ್ದಾರೆ.
ನವದೆಹಲಿ: ಸಾರ್ವಜನಿಕ ಜೀವನದಲ್ಲಿ ಪಾರದರ್ಶಕತೆಯನ್ನು ಸಾಧಿಸುವ ಸಲುವಾಗಿ ಬಿಜೆಪಿ ಅಭಿಯಾನವನ್ನು ಆರಂಭಿಸಿದ್ದು, ಇದರಡಿ ಬಿಜೆಪಿ ಕಾರ್ಯಕರ್ತರು, ನಾಯಕರು, ಸಚಿವರು ಪ್ರಧಾನಿ ನರೇಂದ್ರ ಮೋದಿಯವರ ಆ್ಯಪ್ ಮೂಲಕ ರೂ. 5 ರಿಂದ ರೂ.1000 ವರೆಗೆ ಹಣವನ್ನು ಕೊಡುಗೆ ನೀಡುತ್ತಿದ್ದಾರೆ.
ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಷಾ ಅವರು ರೂ.1000 ಸಾವಿರನ್ನು ನೀಡಿದ್ದು, ಇದರ ರಿಸಿಪ್ಟ್ನ್ನು ಟ್ವಿಟರ್ನಲ್ಲಿ ಹಂಚಿಕೊಂಡಿದ್ದಾರೆ.
‘ನಮ್ಮ ಮೌಲ್ಯಗಳನ್ನು ಎತ್ತಿಹಿಡಿಯುವ ಸಲುವಾಗಿ ಸಾರ್ವಜನಿಕ ಜೀವನದಲ್ಲಿ ಪಾರದರ್ಶಕತೆ ಸಾಧಿಸುವ ನಿಟ್ಟಿನಲ್ಲಿ ಬಿಜೆಪಿ ಕಾರ್ಯಕರ್ತರಿಂದ ‘ಮೈಕ್ರೋ ಡೊನೇಷನ್’ ಬಯಸಿ ನಮೋ ಆ್ಯಪ್ ಮೂಲಕ ಅಭಿಯಾನ ಆರಂಭಿಸಿದೆ. ನೀವು ರೂ.5ರಿಂದ ರೂ.1000ವರೆಗೆ ಹಣವನ್ನು ಇಲ್ಲಿ ದೇಣಿಗೆ ಮಾಡಬಹುದು’ ಎಂದು ಷಾ ಹೇಳಿದ್ದಾರೆ.
‘ಬಿಜೆಪಿ ಕಾರ್ಯಕರ್ತನಾಗಿ ನಾನು ಪಕ್ಷಕ್ಕಾಗಿ ರೂ.1 ಸಾವಿರ ನೀಡಿದ್ದೇನೆ. ಎಲ್ಲಾ ಕಾರ್ಯಕರ್ತರೂ ಮತ್ತು ಹಿತೈಷಿಗಳು ಸಾರ್ವಜನಿಕ ಜೀವನದಲ್ಲಿ ಪಾರದರ್ಶಕತೆ ತರುವ ಈ ಅಭಿಯಾನದಲ್ಲಿ ಪಾಲ್ಗೊಳ್ಳಬೇಕು ಮತ್ತು ನಮೋ ಆ್ಯಪ್ ಅಥವಾ narendramodi.in ಮೂಲಕ ಹಣ ದೇಣಿಗೆ ನೀಡಬಹುದು’ ಎಂದಿದ್ದಾರೆ.
ಬಿಜೆಪಿ ಪಾರದರ್ಶಕತೆ ಮತ್ತು ಸಾರ್ವಜನಿಕ ಜೀವನದಲ್ಲಿ ಪ್ರಾಮಾಣಿಕತಯೆ ಬಲಿಷ್ಠ ಪ್ರತಿಪಾದಕನಾಗಿದ್ದು, ಮೋದಿ ನೇತೃತ್ವದಲ್ಲಿ ಕೇಂದ್ರದಲ್ಲಿ ಅತ್ಯಂತ ಪಾರದರ್ಶಕ ಮತ್ತು ಪ್ರಾಮಾಣಿಕ ಸರ್ಕಾರ ನೀಡುತ್ತಿದೆ ಎಂದಿದೆ.
ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್ ಅವರೂ ಮಂಗಳವಾರ ರೂ.1000 ನ್ನು ಪಕ್ಷಕ್ಕೆ ನೀಡಿದ್ದಾರೆ.
As a BJP karyakarta myself, I have donated an amount of Rs 1,000 to the party through NM app. I appeal to all our karyakartas and well wishers to join the initiative for bringing in transparency in public life and donate using either NM app or at https://t.co/VILyxBFfdE. pic.twitter.com/J828UwsIq2
— Amit Shah (@AmitShah) October 23, 2018
source: NDTV
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.