2018ನೇ ಸಾಲಿನ ‘ಸಿಯೋಲ್ ಶಾಂತಿ ಪುರಸ್ಕಾರ’ಕ್ಕೆ ಪ್ರಧಾನಿ ನರೇಂದ್ರ ಮೋದಿಯವರು ಪಾತ್ರರಾಗಿದ್ದಾರೆ ಎಂದು ಸಿಯೋಲ್ ಪೀಸ್ ಪ್ರೈಝ್ ಕಲ್ಚುರಲ್ ಫೌಂಡೇಶನ್ ಅಧ್ಯಕ್ಷ ಕ್ವಾನ್ ಇ ಹೈಕ್ ಬುಧವಾರ ಘೋಷಣೆ ಮಾಡಿದ್ದಾರೆ.
ನವದೆಹಲಿ: ತನ್ನ ಆರ್ಥಿಕ ದೃಷ್ಟಿಕೋನದ ಮೂಲಕ ವಿಶ್ವಶಾಂತಿಗೆ ಕೊಡುಗೆಗಳನ್ನು ನೀಡುತ್ತಿರುವ ಪ್ರಧಾನಿ ನರೇಂದ್ರ ಮೋದಿಯವರಿಗೆ ಈ ವರ್ಷದ ’ಸಿಯೋಲ್ ಶಾಂತಿ ಪುರಸ್ಕಾರ’ ಲಭಿಸಲಿದೆ.
ಸಿಯೋಲ್ ಪೀಸ್ ಪ್ರೈಝ್ ಕಲ್ಚುರಲ್ ಫೌಂಡೇಶನ್ ಅಧ್ಯಕ್ಷ ಕ್ವಾನ್ ಇ ಹೈಕ್ ಅವರು ಬುಧವಾರ ಈ ಘೋಷಣೆ ಮಾಡಿದ್ದಾರೆ. ಈ ಪ್ರಶಸ್ತಿ ಪಡೆದ 14ನೇ ವ್ಯಕ್ತಿಯಾಗಿ ಪ್ರಧಾನಿ ಹೊರಹೊಮ್ಮಿದ್ದಾರೆ.
ಮೋದಿನಾಮಿಕ್ಸ್, ಮೋದಿ ಡಾಕ್ಟರೀನ್, ಆಕ್ಟ್ ಈಝಿ ಪಾಲಿಸಿಗಳನ್ನು ಪರಿಗಣಿಸಿ ಅವರಿಗೆ ಈ ಪ್ರತಿಷ್ಟಿತ ಪ್ರಶಸ್ತಿ ಲಭಿಸಿದೆ.
2018ನೇ ಸಾಲಿನ ಸಿಯೋಲ್ ಶಾಂತಿ ಪುರಸ್ಕಾರವನ್ನು ನರೇಂದ್ರ ಮೋದಿಯವರಿಗೆ ನೀಡಲು ಪ್ರಸಸ್ತಿ ಸಮಿತಿ ನಿರ್ಧರಿಸಿದೆ. ಅಂತಾರಾಷ್ಟ್ರೀಯ ಸಹಕಾರ, ಹೆಚ್ಚುತ್ತಿರುವ ಜಾಗತಿಕ ಆರ್ಥಿಕ ಪ್ರಗತಿ, ಆರ್ಥಿಕ ಪ್ರಗತಿ, ಭ್ರಷ್ಟಚಾರದ ವಿರುದ್ಧ ಕ್ರಮ ಮತ್ತು ಸಾಮಾಜಿಕ ಏಕೀಕರಣ ಪ್ರಯತ್ನಗಳ ಮೂಲಕ ಭಾರತದಲ್ಲಿ ಮಾನವ ಅಭಿವೃದ್ಧಿಯ ಬೆಳವಣಿಗೆ ಮೋದಿ ಶ್ರಮಿಸುತ್ತಿರುವ ಹಿನ್ನಲೆಯಲ್ಲಿ ಅವರನ್ನು ಈ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ ಎಂದು ವಿದೇಶಾಂಗ ವ್ಯವಹಾರಗಳ ಸಚಿವಾಲಯದ ಪ್ರಕಟನೆಯಲ್ಲಿ ತಿಳಿಸಲಾಗಿದೆ.
ಭಾರತೀಯ ಮತ್ತು ಜಾಗತಿಕ ಆರ್ಥಿಕ ಅಭಿವೃದ್ಧಿಗೆ ಮೋದಿ ನೀಡುತ್ತಿರುವ ಕೊಡುಗೆಗಳನ್ನು ಸಮಿತಿ ಪರಿಗಣಿಸಿದೆ. ಬಡವರ ಮತ್ತು ಶ್ರೀಮಂತರ ನಡುವಣ ಅಂತರವನ್ನು ’ಮೋದಿನಾಮಿಕ್ಸ್’ ತಗ್ಗಿಸುತ್ತಿದೆ ಎಂದು ಅದು ಅಭಿಪ್ರಾಯಪಟ್ಟಿದೆ.
ನೋಟ್ ಬ್ಯಾನ್ ಮತ್ತು ಇತರ ಭ್ರಷ್ಟಾಚಾರ ವಿರೋಧಿ ಕಾರ್ಯಗಳ ಮೂಲಕ ಮೋದಿ ಆಡಳಿತ ವ್ಯವಸ್ಥೆಯನ್ನು ಸ್ವಚ್ಛ ಮಾಡಿದ್ದಾರೆ ಎಂದಿದೆ.
ಕೊರಿಯಾದ ಸಿಯೋಲ್ನಲ್ಲಿ ನಡೆದ 24ನೇ ಸಮ್ಮರ್ ಒಲಿಂಪಿಕ್ಸ್ನ ಸ್ಮರಣಾರ್ಥ 1990ರಿಂದ ಪ್ರತಿ ಎರಡು ವರ್ಷಗಳಿಗೊಮ್ಮೆ ‘ಸಿಯೋಲ್ ಶಾಂತಿ ಪುರಸ್ಕಾರ’ವನ್ನು ನೀಡಲಾಗುತ್ತದೆ.
source : ANI
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.