ಆರಂಭಗೊಂಡ ಕೇವಲ ಒಂದು ತಿಂಗಳಲ್ಲಿ ಆಯುಷ್ಮಾನ್ ಯೋಜನೆಯ ಪಲಾನುಭವಿಗಳ ಸಂಖ್ಯೆ 1ಲಕ್ಷ ಗಡಿಯನ್ನು ದಾಟಿದೆ. ಮಧ್ಯಪ್ರದೇಶದ 46 ವರ್ಷದ ರೋಗಿ ಈ ಯೋಜನೆಯ 1ಲಕ್ಷನೇಯ ಫಲಾನುಭವಿ ಎನಿಸಿದ್ದಾರೆ.
ನವದೆಹಲಿ: ಕೇಂದ್ರ ಸರ್ಕಾರದ ಮಹತ್ವಾಕಾಂಕ್ಷೆಯ ಆಯುಷ್ಮಾನ್ ಭಾರತ್-ಪ್ರಧಾನ ಮಂತ್ರಿ ಜನ್ ಆರೋಗ್ಯ ಯೋಜನಾ ಆರಂಭಗೊಂಡ ಕೇವಲ ಒಂದು ತಿಂಗಳೊಳಗೆ ಒಂದು ಲಕ್ಷ ಫಲಾನುಭವಿಗಳ ಗಡಿಯನ್ನು ದಾಟಿದೆ. ಸೆ.23ರಂದು ಈ ಯೋಜನೆ ಆರಂಭಗೊಂಡಿತ್ತು.
ರೆವಾದ ವಿಂದ್ಯಾ ಆಸ್ಪತ್ರೆಗೆ ದಾಖಲಾದ ಮಧ್ಯಪ್ರದೇಶದ 46 ವರ್ಷದ ರೋಗಿ ಆಯುಷ್ಮಾನ್ ಭಾರತ್ ಯೋಜನೆಯ 1,00,000ನೇ ಫಲಾನುಭವಿಯಾಗಿದ್ದಾರೆ. ಇವರ ಚಕಿತ್ಸೆಗೆ 50 ಸಾವಿರ ರೂಪಾಯಿಗಳನ್ನು ಯೋಜನೆಯಡಿ ನೀಡಲಾಗಿದೆ ಎಂದು ಕೇಂದ್ರ ಆರೋಗ್ಯ ಸಚಿವ ಜೆ.ಪಿ ನಡ್ಡಾ ಹೇಳಿದ್ದಾರೆ.
ಈ ಯೋಜನೆಯ ಅನುಷ್ಠಾನದಲ್ಲಿ ಕೆಲವೊಂದು ಆರಂಭಿಕ ಸಮಸ್ಯೆಗಳಿವೆ ಎಂಬುದನ್ನು ಆಯುಷ್ಮಾನ್ ಭಾರತ್ ಸಿಇಓ ಇಂದು ಭೂಷಣ್ ಒಪ್ಪಿಕೊಂಡಿದ್ದು, ಇನ್ನು ಮೂರು ತಿಂಗಳಲ್ಲಿ ಅದು ಸ್ಥಿರವಾಗಲಿದೆ. ಎರಡು ಮೂರು ವರ್ಷಗಳಲ್ಲಿ ಯೋಜನೆಯ ನಿಜವಾದ ಪ್ರಭಾವ ಕಾಣಿಸಲಾರಂಭಿಸಲಿದೆ ಎಂದು ಭರವಸೆ ವ್ಯಕ್ತಪಡಿಸಿದ್ದಾರೆ.
ಈಗಾಗಲೇ ಎರಡು ಲಕ್ಷ ಮಂದಿಗೆ ಫಲಾನುಭವಿ ಕಾರ್ಡ್ ವಿತರಣೆ ಮಾಡಲಾಗಿದೆ, ಆಸ್ಪತ್ರೆಗೆ ತೆರಳುವ ಫಲಾನುಭವಿಗಳನ್ನು ಗುರುತಿಸುತ್ತಿದ್ದೇವೆ. ಅರ್ಹರಾಗಿದ್ದವರು 14555ಗೆ ಕರೆ ಮಾಡಿ ಮಾಹಿತಿ ಪಡೆಯಬಹುದು ಎಂದಿದ್ದಾರೆ.
source; Hindustantimes
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.