ಪ್ರಸಿದ್ಧ ಶಿರಿಡಿ ಸಾಯಿಬಾಬಾ ಮಂದಿರದಲ್ಲಿ ಜರುಗಿದ ಸಾಯಿಬಾಬಾ ಸಮಾಧಿ ಶತಾಬ್ದಿ ಉತ್ಸವದ ವೇಳೆ, ಕೇವಲ 3 ದಿನಗಳಲ್ಲಿ ರೂ.5.97 ಕೋಟಿ ಕಾಣಿಕೆ ಹರಿದು ಬಂದಿದೆ.
ಶಿರಿಡಿ: ದೇಶದ ಪ್ರಸಿದ್ಧ ದೇಗುಲಗಳಲ್ಲಿ ಒಂದಾದ ಮಹಾರಾಷ್ಟ್ರದ ಶಿರಿಡಿ ಸಾಯಿಬಾಬಾ ಮಂದಿರ ಕೇವಲ 3 ದಿನಗಳಲ್ಲಿ ಬರೋಬ್ಬರಿ ರೂ.5.97 ಕೋಟಿಯನ್ನು ಸಂಗ್ರಹ ಮಾಡಿದೆ.
ಮಂದಿರದಲ್ಲಿ ಜರುಗಿದ ಸಾಯಿಬಾಬಾ ಸಮಾಧಿ ಶತಾಬ್ದಿ ಉತ್ಸವದ ವೇಳೆ ಅಪಾರ ಸಂಖ್ಯೆಯ ಭಕ್ತಾದಿಗಳು ಆಗಮಿಸಿದ್ದು, ಕಾಣಿಕೆಗಳ ಪ್ರಮಾಣವೂ ದುಪ್ಪಟ್ಟುಗೊಂಡಿದೆ.
1918ರಲ್ಲಿ ಶಿರಿಡಿ ಸಾಯಿಬಾಬಾ ಸಮಾಧಿಗೊಂಡರು ಎಂದು ನಂಬಲಾಗಿದೆ. ಇದರ ಸ್ಮರಣಾರ್ಥ ಪ್ರತಿವರ್ಷ ವಿಜಯದಶಮಿಯಂದು ಸಮಾಧಿ ಉತ್ಸವವನ್ನು ನಡೆಸಲಾಗುತ್ತದೆ. ದೇಶ ವಿದೇಶಗಳಿಂದ ಭಕ್ತರು ಆಗಮಿಸುತ್ತಾರೆ.
ಪ್ರಧಾನಿ ನರೇಂದ್ರ ಮೋದಿಯವರೂ ಶುಕ್ರವಾರ ಸಾಯಿಬಾಬಾ ಮಂದಿರಕ್ಕೆ ಆಗಮಿಸಿ ಸಾಯಿಬಾಬಾ ದರ್ಶನ ಪಡೆದಿದ್ದರು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.