ಗಂಗೆ, ಯಮುನೆ ಸಂಗಮಿಸುವ ಅಲಹಾಬಾದ್ ಇನ್ನು ಮುಂದೆ ಪ್ರಯಾಗ್ ರಾಜ್ ಎಂಬ ಹೆಸರಿನಿಂದ ಜನಜನಿತವಾಗಲಿದೆ. ಉತ್ತರಪ್ರದೇಶ ಸಚಿವ ಸಂಪುಟ ಈ ಬಗೆಗಿನ ಪ್ರಸ್ತಾಪಕ್ಕೆ ಅನುಮೋದನೆ ನೀಡಿದ್ದು, ಇನ್ನು ಮುಂದೆ ಎಲ್ಲಾ ದಾಖಲೆಗಳಲ್ಲಿಯೂ ಅಲಹಾಬಾದ್ ಹೆಸರು ಪ್ರಯಾಗ್ ರಾಜ್ ಎಂದಾಗಲಿದೆ.
ಲಕ್ನೋ: ಅಲಹಾಬಾದ್ ಹೆಸರನ್ನು ಪ್ರಯಾಗ್ ರಾಜ್ ಎಂದು ಬದಲಿಸುವ ಪ್ರಸ್ತಾಪಕ್ಕೆ ಉತ್ತರಪ್ರದೇಶ ಸಚಿವ ಸಂಪುಟ ಮಂಗಳವಾರ ಅನುಮೋದನೆ ನೀಡಿದೆ. ಈ ಬಗೆಗಿನ ನಿರ್ದೇಶನವನ್ನು ಎಲ್ಲಾ ಸರ್ಕಾರಿ ಇಲಾಖೆಗಳಿಗೆ, ಸಂಸ್ಥೆಗಳಿಗೆ ಕಳುಹಿಸಿಕೊಡಲಾಗುವುದು ಎಂದು ಸಂಪುಟ ಹೇಳಿದೆ.
ಬಹುಜನರ ಒತ್ತಾಯದ ಮೇರೆಗೆ ಅಲಹಾಬಾದ್ನ್ನು ಪ್ರಯಾಗ್ ರಾಜ್ ಎಂದು ಬದಲಿಸುವ ಬಗ್ಗೆ ಪರಿಶೀಲನೆ ನಡೆಸಲಾಗುವುದು ಎಂದು ಯುಪಿ ಸಿಎಂ ಯೋಗಿ ಆದಿತ್ಯನಾಥ ಇತ್ತೀಚಿಗೆ ಹೇಳಿದ್ದರು.
ಗಂಗಾ ಮತ್ತು ಯಮುನಾ ನದಿಯ ಸಂಗಮ ಸ್ಥಳವಾದ ಈ ನಗರ ಎಲ್ಲಾ ಪ್ರಯಾಗಗಳ ರಾಜ ಆಗಿದೆ, ಹೀಗಾಗಿ ಇದನ್ನು ಪ್ರಯಾಗ್ ರಾಜ್ ಎಂದು ಮರುನಾಮಕರಣ ಮಾಡಲಾಗಿದೆ ಎಂದು ಅವರು ಹೇಳಿದ್ದಾರೆ.
source; ZEENEWS
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.