ನಾಗ್ಪುರ: ಖಿಚಡಿ ಭಾರತದ ಖ್ಯಾತ ಖಾದ್ಯಗಳಲ್ಲಿ ಒಂದು. ಆರೋಗ್ಯ ಪೂರ್ಣವಾದ ಈ ಆಹಾರ ದೇಶ ವಿದೇಶಗಳಲ್ಲಿ ಜನಪ್ರಿಯಗೊಂಡಿದೆ. ಖ್ಯಾತ ಚೆಫ್ ವಿಷ್ಣು ಮನೋಹರ್ ಅವರು ಸುಮಾರು 3 ಸಾವಿರ ಕೆಜಿಯ ಖಿಚಡಿಯನ್ನು ಒಂದೇ ಪಾತ್ರೆಯಲ್ಲಿ ತಯಾರಿಸುವ ಮೂಲಕ ಗಿನ್ನಿಸ್ ದಾಖಲೆ ಮಾಡಿದ್ದಾರೆ.
ನಾಗ್ಪುರದಲ್ಲಿ ಕೇಂದ್ರ ಸಚಿವ ನಿತಿನ್ ಗಡ್ಕರಿಯವರ ಸಮ್ಮುಖದಲ್ಲಿ 3 ಸಾವಿರ ಕೆಜಿ ಖಿಚಡಿ ತಯಾರಾಗಿದೆ. ಇದಕ್ಕಾಗಿ 275 ಕೆಜಿ ಅಕ್ಕಿ, 125 ಕೆಜಿ ಹೆಸರುಬೇಳೆ, 150 ಕೆಜಿ ಚನಾ ದಾಲ್, 3000 ಲೀಟರ್ ನೀರು, 150 ಕೆಜೆ ತುಪ್ಪವನ್ನು ಬಳಸಲಾಗಿದೆ.
ಗಡ್ಕರಿಯವರು ಮನೋಹರ್ ಅವರಿಗೆ ಅಭಿನಂದನೆಗಳನ್ನು ತಿಳಿಸಿದ್ದು, ಭಾರತೀಯ ಖಾದ್ಯಗಳನ್ನು ವಿಶ್ವದಾದ್ಯಂತ ಜನಪ್ರಿಯಗೊಳಿಸುತ್ತಿರುವುದಕ್ಕೆ ಧನ್ಯವಾದಗಳನ್ನೂ ಅರ್ಪಿಸಿದ್ದಾರೆ.
ಕಳೆದ ವರ್ಷ ದೆಹಲಿಯಲ್ಲಿ 918ಕೆಜಿ ಖಿಚಡಿಯನ್ನು ಚೆಫ್ ಸಂಜೀವ್ ಕಪೂರ್ ಸಿದ್ದಪಡಿಸಿದ್ದರು. ಇದಕ್ಕೆ ಗಿನ್ನಿಸ್ ದಾಖಲೆಯ ಗೌರವ ಸಿಕ್ಕಿತ್ತು. ಇದೀಗ ಈ ದಾಖಲೆಯನ್ನು ನಾಗ್ಪುರದಲ್ಲಿ ಸಿದ್ಧವಾದ ಖಿಚಡಿ ಪುಡಿಗಟ್ಟಿದೆ.
source; Indianexpress
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.