ನವದೆಹಲಿ: ರಫೆಲ್ ಒಪ್ಪಂದದ ಬಗ್ಗೆ ರಾಜಕೀಯ ಕಿತ್ತಾಟಗಳು ನಡೆಯುತ್ತಿರುವಂತೆಯೇ, ಡಸಾಲ್ಟ್ ಆವಿಯೇಶನ್ ಸಂಸ್ಥೆ 2019ರಿಂದ ಭಾರತಕ್ಕೆ ರಫೆಲ್ ಯುದ್ಧ ವಿಮಾನವನ್ನು ಪೂರೈಕೆ ಮಾಡುವುದಾಗಿ ಘೋಷಿಸಿದೆ. ಅಲ್ಲದೇ ಮುಂದಿನ ತಿಂಗಳಿನಿಂದ ಹೊಸ ಆರ್ಡರ್ಗಳಿಗಾಗಿ ಎದುರು ನೋಡುವುದಾಗಿ ತಿಳಿಸಿದೆ.
ಒರ್ಲ್ಯಾಂಡೋದಲ್ಲಿ ಸೋಮವಾರ ಜರುಗಿದ ವಿಶ್ವದ ಅತೀದೊಡ್ಡ ಬ್ಯುಸಿನೆಸ್ ಜೆಟ್ ಶೋದಲ್ಲಿ ಮಾತನಾಡಿದ ಡಸಾಲ್ಟ್ ಆವಿಯೇಶನ್ ಕಾರ್ಯನಿರ್ವಾಹಕ ಮುಖ್ಯಸ್ಥ ಎರಿಕ್ ಟ್ರಪ್ಪಿಯರ್ ಅವರು, 2019ರಿಂದ ಭಾರತಕ್ಕೆ ರಫೆಲ್ ಜೆಟ ಪೂರೈಕೆಯಾಗಲಿದೆ ಎಂದಿದ್ದಾರೆ.
ರಕ್ಷಣಾ ಸಚಿವೆ ನಿರ್ಮಲಾ ಸೀತಾರಾಮನ್ ಅವರು, ಫ್ರಾನ್ಸ್ಗೆ ತೆರಳಿ ರಫೆಲ್ ಯುದ್ಧವಿಮಾನದ ಪರಿಶೀಲನೆಗಳನ್ನು ನಡೆಸಿದ ತರುವಾಯ ಈ ಬೆಳವಣಿಗೆ ಜರುಗಿದೆ. ಪ್ಯಾರಿಸ್ನಲ್ಲಿ ರಫೆಲ್ ಉತ್ಪಾದನ ಘಟಕಕ್ಕೆ ತೆರಳಿದ ಅವರು, ಭಾರತಕ್ಕೆ ಪೂರೈಕೆಯಾಗುತ್ತಿರುವ 36 ರಫೆಲ್ ಜೆಟ್ಗಳ ತಯಾರಿಕ ಪ್ರಗತಿಯನ್ನು ಪರಿಶೀಲಿಸಿದರು.
2015ರ ಎಪ್ರಿಲ್ 10ರಂದು ಪ್ರಧಾನಿ ನರೇಂದ್ರ ಮೋದಿಯವರು, ಫ್ರಾನ್ಸ್ನ ಅಂದಿನ ಅಧ್ಯಕ್ಷ ಹೋಲೆಂಡ್ ಅವರೊಂದಿಗೆ 36 ರಫೆಲ್ ಜೆಟ್ ಖರೀದಿಯ ಒಪ್ಪಂದದ ಬಗ್ಗೆ ಮಾತುಕತೆ ನಡೆಸಿದ್ದರು. 2016ರ ಸೆ.23ರಂದು ಈ ಒಪ್ಪಂದ ಅಂತಿಮವಾಗಿತ್ತು.
source; ZEENEWS
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.