ತಿರುವನಂಪತಪುರಂ: ಕೇರಳದ ಪ್ರಸಿದ್ಧ ಶಬರಿಮಲೆ ದೇಗುಲವನ್ನು ನೋಡಿಕೊಳ್ಳುತ್ತಿರುವ ತ್ರಿವಂಕೂರ್ ದೇವಸ್ವಂ ಮಂಡಳಿ, ಇಂದು ಶಬರಿಮಲೆಗೆ ಸಂಬಂಧಿಸಿದ ಸುಪ್ರೀಂಕೋರ್ಟ್ ತೀರ್ಪು ಸೇರಿದಂತೆ ವಿವಿಧ ವಿಷಯಗಳ ಬಗ್ಗೆ ಚರ್ಚಿಸಲು ಎಲ್ಲಾ ಪಾಲುದಾರರೊಂದಿಗೆ ಸಭೆಯನ್ನು ನಡೆಸಲಿದೆ.
ಅಕ್ಟೋಬರ್ 17ರಂದು ಅಯ್ಯಪ್ಪ ದೇಗುಲದ ಬಾಗಿಲು ಭಕ್ತರಿಗಾಗಿ ತೆರೆಯಲಿದೆ. ಸುಪ್ರೀಂ ತೀರ್ಪಿನಂತೆ ಈ ವರ್ಷದಿಂದ ಎಲ್ಲಾ ವಯಸ್ಸಿನ ಮಹಿಳೆಯರೂ ದೇಗುಲಕ್ಕೆ ಪ್ರವೇಶಿಸಬಹುದಾಗಿದೆ.ದರೆ ಇದಕ್ಕೆ ಭಕ್ತರ ತೀವ್ರ ವಿರೋಧವಿದೆ. ಈ ಹಿನ್ನಲೆಯಲ್ಲಿ ತ್ರಿವಂಕೂರ್ ದೇವಸ್ವಂ ಮಂಡಳಿ ಇಂದಿನ ಸಭೆಯಲ್ಲಿ ಯಾವ ನಿರ್ಧಾರ ತೆಗೆದುಕೊಳ್ಳುತ್ತದೆ ಎಂಬುದು ಅತೀ ಮಹತ್ವ ಪಡೆದುಕೊಂಡಿದೆ.
ಪಂದಳ ರಾಜ ಮನೆತನ, ಶಬರಿಮಲೆ ದೇಗುಲದ ಅರ್ಚಕರು ಮತ್ತು ಅವರ ಸಂಘಟನೆ, ವಿವಿಧ ಹಿಂದೂ ಸಂಘಟನೆಗಳನ್ನು ದೇವಸ್ವಂ ಮಂಡಳಿ ಇಂದಿನ ಸಭೆಗೆ ಆಹ್ವಾನಿಸಿದೆ.
ತಿರುವನಂಪತಪುರಂನ ದೇವಸ್ವಂ ಮಂಡಳಿ ಕಛೇರಿಯಲ್ಲಿ ಬೆಳಿಗ್ಗೆ 10 ಗಂಟೆಯಿಂದ ಸಭೆ ಆರಂಭಗೊಳ್ಳಲಿದೆ.
source; ZEENEWS
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.