ನವದೆಹಲಿ: ಭಾರತದ ಖ್ಯಾತ ತಬಲಾ ವಾದಕ ಲಚ್ಚು ಮಹಾರಾಜ್ ಅವರ 110ನೇ ಜನ್ಮದಿನವನ್ನು ಇಂದು ಆಚರಿಸಲಾಗುತ್ತಿದ್ದು, ಗೂಗಲ್ ಸುಂದರವಾದ ಡೂಡಲ್ ಮೂಲಕ ಅವರಿಗೆ ಗೌರವ ಸಮರ್ಪಣೆ ಮಾಡಿದೆ.
ಲಕ್ಷ್ಮೀ ನಾರಾಯಣ ಸಿಂಗ್ ಆಗಿ ಜನಿಸಿದ ಲಚ್ಚು ಮಹಾರಾಜ್ ಅವರು, ಹಿಂದಿಯ ಹಲವಾರು ಸಿನಿಮಾಗಳಲ್ಲಿ ನಟನೆಯನ್ನೂ ಮಾಡಿದ್ದಾರೆ. ಇವರು ಬಾಲಿವುಡ್ ಖ್ಯಾತ ನಟ ಗೋವಿಂದ ಅವರ ಮಾವನೂ ಹೌದು.
ಪದ್ಮಶ್ರೀ ಪ್ರಶಸ್ತಿಗೆ ನಾಮನಿರ್ದೇಶನಗೊಂಡಿದ್ದರೂ, ಅದನ್ನು ತಿರಸ್ಕರಿಸಿ ನನಗೆ ಜನರ ಮೆಚ್ಚುಗೆ ಮಾತ್ರ ಸಾಕು ಯಾವುದೇ ಪ್ರಶಸ್ತಿಗಳು ಬೇಡ ಎಂದಿದ್ದರು.
ಬನಾರಸ್ ಘರಾನದಲ್ಲಿ ತರಬೇತಿಯನ್ನು ಪಡೆದಿದ್ದ ಇವರು, ಎಳವೆಯಿಂದಲೇ ಪ್ರದರ್ಶನ ನೀಡಲು ಆರಂಭಿಸಿದ್ದರು. ತುರ್ತುಪರಿಸ್ಥತಿಯ ಸಂದರ್ಭದಲ್ಲಿ ಜೈಲಿನೊಳಗೆ ಕುಳಿತು ಇವರು ತಬಲಾ ನುಡಿಸಿದ್ದರು.
ಇಂದು ಅವರ 110ನೇ ಜನ್ಮದಿನವಾಗಿದ್ದು, ಡೂಡಲ್ ಅವರು ತಬಲಾ ವಾದಿಸುತ್ತಿರುವ ಭಂಗಿಯಲ್ಲಿ ಆನಿಮೇಶನ್ ಚಿತ್ರ ಬಿಡಿಸಿ ಡೂಡಲ್ ರಚನೆ ಮಾಡಿದೆ.
source; ZEENEWS
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.