ನವದೆಹಲಿ: ವಾಯುಶಕ್ತಿ, ಫಿರಂಗಿದಳ, ಅಮೌರ್ನ್ನು ಒಳಗೊಂಡ ಭಾರತೀಯ ಸೇನೆಯ ಸಣ್ಣ, ಮಧ್ಯಮ ಮತ್ತು ಸ್ವಯಂ ಹೋರಾಟದ ಘಟಕ ಏಕೀಕೃತ ಹೋರಾಟ ಗುಂಪು(ಇಂಟಿಗ್ರೇಟೆಡ್ ಬ್ಯಾಟಲ್ ಗ್ರೂಪ್ಸ್(ಐಬಿಜಿ)ಗಳು ಇನ್ನು ಮುಂದೆ ವಾಸ್ತವ. ಭಾನುವಾರ ನವದೆಹಲಿಯಲ್ಲಿ ಸಮಾಪನಗೊಂಡ ದ್ವೈವಾರ್ಷಿಕ ಆರ್ಮಿ ಕಮಾಂಡರ್ಗಳ ಕಾನ್ಫರೆನ್ಸ್ನಲ್ಲಿ ಈ ಘಟಕಗಳ ಸ್ಥಾಪನೆಗೆ ಅನುಮೋದನೆ ಸಿಕ್ಕಿದೆ.
ಈ ಘಟಕ ಸಾಂಪ್ರದಾಯಿಕ ಹೋರಾಟದ ರಚನೆಗೆ ತುಸು ತದ್ವಿರುದ್ಧವಾಗಿರಲಿದೆ. ಸೇನಾ ಘಟಕದಲ್ಲಿ ಪ್ರಸ್ತುತ 8-10 ಬ್ರಿಗೇಡ್ಗಳಿರುತ್ತದೆ. ಬ್ರಿಗೇಡ್ 800 ಸೈನಿಕರ 3-4 ಬೆಟಾಲಿಯನ್ ಹೊಂದಿರುತ್ತದೆ. ಆದರೆ ಐಬಿಜಿ 6 ಬೆಟಾಲಿಯನ್ ಹೊಂದಲಿದೆ.
ಅಲ್ಲದೇ ಈ ಬೆಟಾಲಿಯನ್ನಲ್ಲಿ ಇರುವವರಿಗೆ ವಿವಿಧ ಭಾಷೆಗಳ ತರಬೇತಿ ನೀಡಲಾಗುತ್ತದೆ. ಉರ್ದು ಸೇರಿದಂತೆ ಅನೇಕ ಭಾರತೀಯ ಭಾಷೆಗಳನ್ನು, ವಿದೇಶಿ ಭಾಷೆಗಳಾದ ಮಂದರಿನ್, ದರಿ, ಪಾಸ್ಟೋಗಳನ್ನೂ ಇವರು ಕಲಿಯಲಿದ್ದಾರೆ. ಅಲ್ಲದೇ ಯುದ್ಧ ತಂತ್ರ, ಹೋರಾಟವೂ ಭಿನ್ನವಾಗಿರಲಿದೆ.
source; Hidnustan times
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.