ಜಕಾರ್ತ: ಪ್ರಸ್ತುತ ಜರಗುತ್ತಿರುವ ಏಷ್ಯನ್ ಪ್ಯಾರಾ ಗೇಮ್ಸ್ನಲ್ಲಿ ಹೈಜಂಪ್ ಪಟು ಶರದ್ ಕುಮಾರ್ ಅವರು ಬಂಗಾರದ ಪದಕವನ್ನು ಜಯಿಸಿದ್ದಾರೆ. ಮಾತ್ರವಲ್ಲ ಈ ವಿಭಾಗದ ಬೆಳ್ಳಿ ಮತ್ತು ಕಂಚು ಕೂಡ ಭಾರತ ಪಾಲಾಗಿದ್ದು, ಈ ಮೂಲಕ ದಾಖಲೆ ನಿರ್ಮಾಣವಾಗಿದೆ.
ವರುಣ್ ಭಟಿ ಅವರು 1.82 ಮೀಟರ್ ಜಿಗಿಯುವ ಮೂಲಕ ಬೆಳ್ಳಿ ಗೆದ್ದಿದ್ದಾರೆ, ತಂಗವೇಳು ಮರಿಯಪ್ಪನ್ ಅವರು 1.67 ಮೀಟರ್ ಜಿಗಿಯುವ ಮೂಲಕ ಕಂಚು ಗೆದ್ದುಕೊಂಡಿದ್ದಾರೆ.
42/63ರ ಕೆಟಗರಿಯಲ್ಲಿ 1.90 ಮೀಟರ್ ಜಿಗಿಯುವ ಮೂಲಕ ಶರದ್ ಮಹತ್ವದ ದಾಖಲೆಯನ್ನು ನಿರ್ಮಿಸಿದ್ದಾರೆ. 42/63 ಕೆಟಗರಿ ಕೆಳ ಕಾಲಿನ ಅಸಮರ್ಥತೆ, ಕಾಲಿನ ಉದ್ದಗಳಲ್ಲಿ ಭಿನ್ನತೆ, ಮಾಂಸಖಂಡಗಳ ಅಶಕ್ತಿ, ಚಲನೆಯಲ್ಲಿ ದೋಷವನ್ನು ಹೊಂದಿದ ದಿವ್ಯಾಂಗ ಕ್ರೀಡಾಳುಗಳನ್ನು ಒಳಗೊಂಡಿದೆ.
ಈ ಕೆಟಗರಿಯಲ್ಲಿ ಶರದ್ ಅವರು 1.90 ಮೀಟರ್ ಜಿಗಿದು ಬಂಗಾರ ಮಾತ್ರವಲ್ಲ, ದಾಖಲೆಯನ್ನೂ ನಿರ್ಮಾಣ ಮಾಡಿದ್ದಾರೆ.
source; NEWSBHARATI
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.