ನವದೆಹಲಿ: ಪ್ರಧಾನಿ ನರೇಂದ್ರ ಮೋದಿಯವರ ಕನಸಿನ ಯೋಜನೆ ‘ಸ್ವಚ್ಛ ಭಾರತ ಅಭಿಯಾನ’ಕ್ಕೆ ಜಪಾನ್ ನೆರವಿನ ಹಸ್ತ ಚಾಚಿದೆ.
ಮೋದಿಯವರಿಗೆ ಲಿಖಿತ ಸಂದೇಶವನ್ನು ರವಾನಿಸಿರುವ ಜಪಾನ್ ಪ್ರಧಾನಿ ಶಿಂಜೋ ಅಬೆಯವರು, ಭಾರತದಲ್ಲಿ ಸ್ವಚ್ಛತಾ ಅಭಿಯಾನವನ್ನು ಉತ್ತೇಜಿಸುವುದಕ್ಕಾಗಿ ಜಪಾನ್ ಸಹಕರಿಸಲಿದೆ ಎಂದಿದ್ದಾರೆ.
ಏಷ್ಯಾವನ್ನು ಆರೋಗ್ಯಯುತ ಸಮಾಜವನ್ನಾಗಿಸಲು ಜಪಾನ್ ಕಟಿಬದ್ಧವಾಗಿದೆ ಎಂದಿರುವ ಅವರು, ಮಹಾತ್ಮ ಗಾಂಧಿ ಇಂಟರ್ನ್ಯಾಷನಲ್ ಸ್ಯಾನಿಟೇಶನ್ ಕನ್ವೆನ್ಷನ್ನ ಯಶಸ್ಸಿಗಾಗಿ ಭಾರತವನ್ನು ಅಭಿನಂದಿಸಿದ್ದಾರೆ.
‘ಶುದ್ಧ ಕುಡಿಯುವ ನೀರು ಮತ್ತು ನೈರ್ಮಲ್ಯ ಸ್ಥಿತಿಯನ್ನು ಸುಧಾರಿಸುವುದು ಇಂದು ಜಗತ್ತೇ ಎದುರಿಸುತ್ತಿರುವ ಸವಾಲಾಗಿದೆ. ಇಂಟರ್ನ್ಯಾಷನಲ್ ಸ್ಯಾನಿಟೇಶನ್ ಕನ್ವೆನ್ಷನ್ನ ಮೂಲಕ ಸಕ್ರಿಯ ಚರ್ಚೆಯಲ್ಲಿ ಪಾಲ್ಗೊಂಡು ಉಭಯ ದೇಶಗಳ ಪಾಲುದಾರಿಕೆಯಲ್ಲಿ ಸವಾಲನ್ನು ಎದುರಿಸಲಾಗುತ್ತದೆ’ ಎಂದಿದ್ದಾರೆ.
ಮಹಾತ್ಮ ಗಾಂಧಿ ಇಂಟರ್ನ್ಯಾಷನಲ್ ಸ್ಯಾನಿಟೇಶನ್ ಕನ್ವೆನ್ಷನ್ 4 ದಿನಗಳ ಅಂತಾರಾಷ್ಟ್ರೀಯ ಕಾನ್ಫರೆನ್ಸ್ ಆಗಿದ್ದು, ವಿಶ್ವದಾದ್ಯಂತದ ಸಚಿವರನ್ನು ವಾಶ್( ವಾಟರ್, ಸ್ಯಾನಿಟೇಶನ್, ಹೈಜಿನ್)ಗಾಗಿ ಒಟ್ಟು ಸೇರುವಂತೆ ಮಾಡಿದೆ.
Source; NDTV
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.