ಗುವಾಹಟಿ: ಮುಸ್ಲಿಂ ಸಮುದಾಯಕ್ಕೆ ಸೇರಿದ ಮೂರ್ತಿಗಳನ್ನು ತಯಾರಿಸುವ ಕಲಾವಿದನೊಬ್ಬ ಈಗ ಅಸ್ಸಾಂನ ಧಾರ್ಮಿಕ ಭಾವೈಕ್ಯತೆಯ ಸಂಕೇತವಾಗಿ ಹೊರಹೊಮ್ಮಿದ್ದಾರೆ. ದರಾಂಗ್ ಮತ್ತು ಉದಲ್ಗುರಿ ಜಿಲ್ಲೆಗಳ ಬಹುತೇಕ ದುರ್ಗಾ ಮೂರ್ತಿ ಮತ್ತು ಪೆಂಡಾಲ್ಗಳು ಇವರ ಕೈಚಳಕದಿಂದಲೇ ಮೂಡಿ ಬರುತ್ತಿವೆ.
45 ಹಸೀಮ್ ಅಲಿ, 10ನೇ ತರಗತಿಯನ್ನು ಅತ್ಯಧಿಕ ಅಂಕಗಳಿಂದ ತೇರ್ಗಡೆ ಮಾಡಿದರು. ಆದರೆ ಬಡತನದಿಂದಾಗಿ ಅರ್ಧದಲ್ಲೇ ಶಿಕ್ಷಣವನ್ನು ತ್ಯಜಿಸಿಸಬೇಕಾದ ಅನಿವಾರ್ಯತೆ ಇವರದ್ದಾಗಿತ್ತು. ಶಿಕ್ಷಣ ಮೊಟಕುಗೊಂಡರೂ ಕಲಾ ದೇವಿ ಇವರ ಕೈಹಿಡಿದಿದ್ದಾಳೆ. ಮೂರ್ತಿ ತಯಾರಿಕೆಯಲ್ಲಿ ಯಾವುದೇ ತರಬೇತಿಯನ್ನು ಪಡೆಯದಿದ್ದರೂ ಅದ್ಭುತವಾಗಿ ದೇವರುಗಳ ಮೂರ್ತಿಯವನ್ನು ಇವರು ಸೃಷ್ಟಿಸಬಲ್ಲರು.
ಕಲಾವಿದ ಕಲುಮೊನಿ ದೇ ಎಂಬುವವರ ಕಾರ್ಯವನ್ನು ನೋಡಿ ನೋಡಿಯೇ ಇವರು ಮೂರ್ತಿ ತಯಾರಿಕೆಯಲ್ಲಿ ಇವರು ಪರಿಣತಿಯನ್ನು ಪಡೆದರು. 2016ರಲ್ಲಿ ಇವರು ರಚಿಸಿದ್ದ ರಾವಣನ ಮೂರ್ತಿ ಎಲ್ಲರ ಪ್ರಶಂಸೆಗೂ ಗುರಿಯಾಗಿತ್ತು, ಆ ಬಳಿಕ ಹಿಂದಿರುಗಿ ನೋಡದ ಇವರು ಇತರ ಮೂರ್ತಿಗಳ ತಯಾರಿಕೆಗೆ ಮುಂದಾದರು. ದುರ್ಗಾ ದೇವಿಯ ಮೂರ್ತಿಯನ್ನೂ ರಚಿಸಿ ಸೈ ಎನಿಸಿಕೊಂಡರು. ಇದೀಗ ಇವರ ಕೈಯಿಂದ ಮೂಡಿ ಬಂದ ದುರ್ಗಾ ಮೂರ್ತಿಗಳಿಗೆ ಎಲ್ಲಿಲ್ಲದ ಬೇಡಿಕೆಯಿದೆ. ಆ ಮೂರ್ತಿಗಳೇ ಇವರ ಜೀವನಕ್ಕೆ ಆಧಾರವಾಗಿದೆ.
source; timesnow
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.