ನವದೆಹಲಿ: ಭಾರತ ಫುಟ್ಬಾಲ್ ತಂಡ ಚೀನಾದ ನೆಲದಲ್ಲಿ ಮೊತ್ತ ಮೊದಲ ಅಂತಾರಾಷ್ಟ್ರೀಯ ಫುಟ್ಬಾಲ್ ಪಂದ್ಯವನ್ನು ಆಡಲು ಸಜ್ಜಾಗಿದ್ದು, ಇದಕ್ಕಾಗಿ ಭಾರತೀಯ ತಂಡವನ್ನು ಪ್ರಕಟಗೊಳಿಸಲಾಗಿದೆ.
ಮಂಗಳವಾರ ಹೆಡ್ ಕೋಚ್ ಸ್ಟೀಫನ್ ಕಾನ್ಸ್ಸ್ಟೈನ್ ಅವರು 22 ಸದಸ್ಯರ ಭಾರತೀಯ ತಂಡವನ್ನು ಪ್ರಕಟಗೊಳಿಸಲಿದ್ದಾರೆ. ಅಕ್ಟೋಬರ್ 13ರಂದು ಚೀನಾದ ಸುಝೌನಲ್ಲಿ ಪಂದ್ಯ ನಡೆಯಲಿದೆ.
ಇದುವರೆಗೆ ಚೀನಾದ ವಿರುದ್ಧ ಭಾರತ ಒಟ್ಟು 17 ಫುಟ್ಬಾಲ್ ಪಂದ್ಯಗಳನ್ನು ಆಡಿದೆ, ಇದರಲ್ಲಿ 12 ಬಾರಿ ಚೀನಾ ಗೆದ್ದಿದೆ. 5 ಪಂದ್ಯಗಳು ಡ್ರಾನಲ್ಲಿ ಅಂತ್ಯಗೊಂಡಿವೆ. ಕೊನೆಯ ಬಾರಿಗೆ 1997ರಲ್ಲಿ ಕೊಚ್ಚಿಯಲ್ಲಿ ಉಭಯ ದೇಶಗಳು ನೆಹರೂ ಕಪ್ ಆಡಿದ್ದವು, ಚೀನಾ 2-1ರಲ್ಲಿ ಜಯಗಳಿಸಿತ್ತು.
ಈ ಬಾರಿ ತಂಡದಲ್ಲಿರುವ ಸದಸ್ಯರು
ಗೋಲ್ಕೀಪರ್ಸ್: ಗುರುಪ್ರೀತ್ ಸಿಂಗ್ ಸಂಧು, ಅಮರೀಂದರ್ ಸಿಂಗ್, ಕರಣ್ಜೀತ್ ಸಿಂಗ್
ಡಿಫೆಂಡರ್ಸ್: ಪ್ರೀತಂ ಕೋಟಲ್, ಸಾರ್ಥಕ್ ಗೊಲಿ, ಸಂದೇಶ್ ಜಿಂಗಾನ್, ಅನಸ್ ಎಡತೊಡಿಕ, ಸಲಾಂ ರಂಜನ್ ಸಿಂಗ್, ಸುಭಾಶಿಸ್ ಬೋಸ್, ನಾರಾಯಣ್ ದಾಸ್.
ಮಿಡ್ಲ್ಫೀಲ್ಡರ್ಸ್: ಉದಾಂತ ಸಿಂಗ್, ನಿಖಿಲ್ ಪೂಜಾರಿ, ಪ್ರಣಾಯ್ ಹಲ್ದಾರ್, ರಾವ್ಲಿನ್ ಬೋರ್ಗಸ್, ಅನಿರುದ್ಧ್ ಥಾಪಾ, ವಿನೀತ್ ರಾಯ್, ಹಲಿಚರಣ್ ನರ್ಜರಿ, ಆಶಿಕ್ ಕುರುನಿಯನ್.
ಫಾರ್ವಡರ್ಸ್: ಸುನೀಲ್ ಚೆಟ್ರಿ, ಜೆಜೆ ಲಲ್ಪೆಕ್ಲುವ, ಸುಮೀತ್ ಪಾಸ್ಸಿ, ಫಾರೂಖ್ ಚೌಧುರಿ.
source; TIMESNOWNEWS.COM
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.