ನವದೆಹಲಿ: ನೋಯ್ಡಾ ಯೂನಿವರ್ಸಿಟಿಯ ವಿದ್ಯಾರ್ಥಿನಿ ಇಶಾ ಬಹ್ಲ್ ಅವರು ಒಂದು ದಿನದ ಮಟ್ಟಿಗೆ ಭಾರತದ ಬ್ರಿಟಿಷ್ ಹೈಕಮಿಷನರ್ ಆಗಿ ನೇಮಕವಾಗಿದ್ದಾರೆ.
ಅಂತಾರಾಷ್ಟ್ರೀಯ ಹೆಣ್ಣು ಮಗು ದಿನಾಚರಣೆಯ ನಿಮಿತ್ತ, ಬ್ರಿಟಿಷ್ ಹೈಕಮಿಷನ್ 18ರಿಂದ 23 ವರ್ಷದ ಯುವತಿಯರಿಗಾಗಿ ಸ್ಪರ್ಧೆಯೊಂದನ್ನು ಆಯೋಜನೆಗೊಳಿಸಿತ್ತು. ಇದರಲ್ಲಿ ವಿಜೇತರಾದವರವನ್ನು 24 ಗಂಟೆಗಳ ಅವಧಿಗೆ ಭಾರತದ ಬ್ರಿಟಿಷ್ ಹೈಕಮಿಷನರ್ ಮಾಡುವ ಘೋಷಣೆ ಮಾಡಿತ್ತು.
‘ನಿಮ್ಮ ಪ್ರಕಾರ ಲಿಂಗ ಸಮಾನತೆ ಎಂದರೇನು?’ ಎಂಬ ಥೀಮ್ನ್ನು ನೀಡಿ ಡಾಕ್ಯುಮೆಂಟರಿ ಸಿದ್ಧಪಡಿಸುವ ಸ್ಪರ್ಧೆ ಇದಾಗಿತ್ತು. ದೇಶದಾದ್ಯಂತ 58 ಡಾಕ್ಯುಮೆಂಟರಿಗಳು ಸಲ್ಲಿಕೆಯಾಗಿದ್ದವು. ಇದರಲ್ಲಿ ಇಶಾ ಬಹ್ಲ್ ಅವರು ವಿಜೇತರಾಗಿ ಹೊರಹೊಮ್ಮಿದ್ದಾರೆ.
ನೊಯ್ಡಾ ಯೂನಿವರ್ಸಿಟಿಯಲ್ಲಿ ಪಬ್ಲಿಕ್ ಪಾಲಿಸಿ ಆಂಡ್ ಲಾ ಕಲಿಯುತ್ತಿರುವ ಬಹ್ಲ್ ಅವರನ್ನು ಒಂದು ದಿನದ ಮಟ್ಟಿಗೆ ಬ್ರಿಟಿಷ್ ಹೈಕಮಿಷನರ್ ಮಾಡಿ ನೇಮಕಗೊಳಿಸಲಾಯಿತು.
ಅಕ್ಟೋಬರ್.11ರಂದು ಅಂತಾರಾಷ್ಟ್ರೀಯ ಹೆಣ್ಣುಮಕ್ಕಳ ದಿನವನ್ನು ಆಚರಣೆ ಮಾಡಲಾಗುತ್ತದೆ.
source; ANI
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.