ವಿಶ್ವಸಂಸ್ಥೆ: ಪ್ರಧಾನಿ ನರೇಂದ್ರ ಮೋದಿಯವರ ನೇತೃತ್ವದಲ್ಲಿ ಕೈಗೊಳ್ಳಲಾಗುತ್ತಿರುವ ಆರ್ಥಿಕ ಸುಧಾರಣೆಗಳಿಗೆ ಮನ್ನಣೆ ನೀಡಿರುವ ಇಂಟರ್ನ್ಯಾಷನಲ್ ಮಾನಿಟರಿ ಫಂಡ್(ಐಎಂಎಫ್), ಈ ವರ್ಷ ಮತ್ತು ಮುಂದಿನ ವರ್ಷ ಭಾರತ ವಿಶ್ವದ ಅತೀವೇಗದಲ್ಲಿ ಪ್ರಗತಿ ಕಾಣುತ್ತಿರುವ ಆರ್ಥಿಕತೆಯಾಗಲಿದೆ ಎಂದು ತಿಳಿಸಿದೆ.
ಬಾಲಿಯಲ್ಲಿ ನಡೆಯಲಿರುವ ಐಎಂಎಫ್ನ ವಾರ್ಷಿಕ ಸಭೆಯ ಹಿನ್ನಲೆಯಲ್ಲಿ ‘ವರ್ಲ್ಡ್ ಎಕನಾಮಿಕ್ ಔಟ್ಲುಕ್’ ಎಂಬ ವರದಿಯನ್ನು ಬಿಡುಗಡೆಗೊಳಿಸಲಾಗಿದ್ದು, ಇದರಲ್ಲಿ ’ಭಾರತದಲ್ಲಿ ಇತ್ತೀಚಿನ ವರ್ಷಗಳಲ್ಲಿ ಜಿಎಸ್ಟಿ, ಹಣದುಬ್ಬರ ಟಾರ್ಗೆಟ್ ಮಾಡುವ ಫ್ರೇಮ್ವರ್ಕ್, ಬ್ಯಾಂಕಿಂಗ್ ವಂಚನೆ ಕಾಯ್ದೆ, ವಿದೇಶಿ ಹೂಡಿಕೆ ಉದಾರೀಕರಣ, ಸುಲಲಿತ ಉದ್ಯಮಕ್ಕೆ ಕ್ರಮ ಇತ್ಯಾದಿ ಹಲವಾರು ಮಹತ್ವದ ಸುಧಾರಣೆಗಳನ್ನು ಅನುಷ್ಠಾನಕ್ಕೆ ತರಲಾಗುತ್ತಿದೆ’ ಎಂದಿದೆ.
ಆದರೆ ಏರುತ್ತಿರುವ ತೈಲ ಬೆಲೆಗಳಿಂದಾಗಿ ಶೇ7.4ರಷ್ಟು ಇರುವ ಪ್ರಗತಿದರಲ್ಲಿ 0.1ರಷ್ಟು ಕಡಿತವಾಗಲಿದೆ, ಆದರೆ ವಿಶ್ವದ ವೇಗದ ಆರ್ಥಿಕತೆಯಾಗಿ ಅದು ಮುಂದುವರೆಯಲಿದೆ ಎಂದಿದೆ.
Source; ZEENEWS
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.