ನವದೆಹಲಿ: ಅಮೆಝಾನ್ ಇಂಡಿಯಾದ ಹಬ್ಬಗಳ ವ್ಯಾಪಾರ ‘ದಿ ಗ್ರೇಟ್ ಇಂಡಿಯನ್ ಫೆಸ್ಟಿವಲ್’ ಶೀಘ್ರದಲ್ಲೇ ಆರಂಭವಾಗುತ್ತಿದೆ. ಈ ಶಾಪಿಂಗ್ ಫೆಸ್ಟಿವಲ್ಗೂ ಮುಂಚಿತವಾಗಿ ಅಮೆಝಾನ್ನಲ್ಲಿ 50 ಸಾವಿರಕ್ಕೂ ಅಧಿಕ ಸೀಝನಲ್ ಜಾಬ್ ಸೃಷ್ಟಿಯಾಗಿದೆ.
ಐದು ದಿನಗಳ ಈ ಶಾಪಿಂಗ್ ಫೆಸ್ಟಿವಲ್ ಅಕ್ಟೋಬರ್ 10ರ ಮಧ್ಯರಾತ್ರಿ 12 ಗಂಟೆಗೆ ಆರಂಭಗೊಳ್ಳಲಿದೆ. ಈ ಹಿನ್ನಲೆಯಲ್ಲಿ ದೇಶದಾದ್ಯಂತ 50 ಸಾವಿರ ಮಂದಿ ಸೀಝನಲ್ ಅಸೋಸಿಯೇಟ್ಸ್ಗಳನ್ನು ಈ ಸಂಸ್ಥೆ ತನ್ನ ಕಾರ್ಯಾಚರಣೆಗಾಗಿ ನೇಮಕ ಮಾಡಿಕೊಂಡಿದೆ. ಈ ಸಂಸ್ಥೆ ದೇಶದಾದ್ಯಂತ 50 ಫುಲ್ಫಿಲ್ಮೆಂಟ್ ಸೆಂಟರ್ ಮತ್ತು 150 ಡೆಲಿವರಿ ಸೆಂಟರ್ಗಳನ್ನು ಹೊಂದಿದೆ.
ದೇಶದಾದ್ಯಂತದ ಅಮೆಝಾನ್ ಫುಲ್ಫಿಲ್ಮೆಂಟ್ ಸೆಂಟರ್ಸ್, ಕಸ್ಟಮರ್ ಸರ್ವಿಸ್ ಸೈಟ್, ಡೆಲಿವರಿ ಸೆಂಟರ್, ಸೊರ್ಟೆಶನ್ ಸೈಟ್ಗಳಲ್ಲಿ ಈ 50 ಸಾವಿರ ಮಂದಿ ವಿವಿಧ ಜವಾಬ್ದಾರಿಗಳನ್ನು ನಿಭಾಯಿಸಲಿದ್ದಾರೆ ಎಂದು ಅಮೆಝಾನ್ ಹೇಳಿದೆ.
source; Indiatoday
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.