ಮುಂಬಯಿ: ಮಹಾರಾಷ್ಟ್ರದ ರತ್ನಾಗಿರಿ, ಸಿಂಧುದುರ್ಗ ಮತ್ತು ಅದರ ಸಮೀಪದ ಇತರ ಪ್ರದೇಶಗಳಲ್ಲಿ ಬೆಳೆಯುವ ಆಲ್ಫೋನ್ಸ್ ಮಾವಿನಹಣ್ಣುಗೆ ಭೌಗೋಳಿಕ ಗುರುತಿಸುವಿಕೆ(ಜಿಯೋಗ್ರಾಫಿಕಲ್ ಇಂಡಿಕೇಶನ್)ನ್ನು ಕೇಂದ್ರ ವಾಣಿಜ್ಯ ಮತ್ತು ಕೈಗಾರಿಕ ಸಚಿವಾಲಯ ನೀಡಿದೆ.
ಹಣ್ಣಿಗೆ ಇಂತಹುದೇ ನಿರ್ದಿಷ್ಟ ಭೌಗೋಳಿಕ ಪ್ರದೇಶದಲ್ಲಿ ಬೆಳೆದ, ಉಗಮಗೊಂಡ ಗುರುತಿಸುವಿಕೆಯನ್ನು ನೀಡುವುದೇ ಜಿಯೋಗ್ರಾಫಿಕಲ್ ಇಂಡಿಕೇಶನ್(GI). ಈ ಭೌಗೋಳಿಕ ಮೂಲ ಹಣ್ಣಿನ ಗುಣಮಟ್ಟ ಮತ್ತು ಘನತೆಯನ್ನು ಬಿಂಬಿಸುತ್ತದೆ. ಇದೀಗ ಆಲ್ಫೋನ್ಸ್ ಹಣ್ಣಿಗೆ ರತ್ನಗಿರಿ, ಸಿಂಧುದುರ್ಗದ ಗುರುತಿಸುವಿಕೆ ಸಿಕ್ಕಿದೆ.
ಮಾವಿನಹಣ್ಣುಗಳ ರಾಜ ಆಲ್ಫೋನ್ಸ್ ಮಹಾರಾಷ್ಟ್ರದಲ್ಲಿ ‘ಆಪುಸ್’ ಎಂದು ಖ್ಯಾತವಾಗಿವೆ. ರುಚಿ, ಆಹ್ಲಾದಕರ ಪರಿಮಳ ಹಾಗೂ ಅನನ್ಯ ಬಣ್ಣದಿಂದಾಗಿ ದೇಶಿ ಮತ್ತು ಅಂತಾರಾಷ್ಟ್ರೀಯ ಮಾರುಕಟ್ಟೆಗಳಲ್ಲಿ ಸಾಕಷ್ಟು ಬೇಡಿಕೆಯನ್ನು ಪಡೆದುಕೊಂಡಿದೆ.
ವಿಶ್ವದ ಅತ್ಯಂತ ಜನಪ್ರಿಯ ಹಣ್ಣುಗಳಲ್ಲಿ ಒಂದಾಗಿರುವ ಆಲ್ಫೋನ್ಸ್, ಜಪಾನ್, ಕೊರಿಯಾ, ಯುರೋಪ್ ಮುಂತಾದ ರಾಷ್ಟ್ರಗಳಿಗೆ ಅತ್ಯಧಿಕ ಪ್ರಮಾಣದಲ್ಲಿ ರಫ್ತಾಗುತ್ತದೆ. ಯುಎಸ್, ಆಸ್ಟ್ರೇಲಿಯಾದಲ್ಲೂ ಆಲ್ಫೋನ್ಸ್ಗೆ ಇತ್ತೀಚಿನ ವರ್ಷಗಳಲ್ಲಿ ಹೆಚ್ಚಿನ ಮಾರುಕಟ್ಟೆ ಸಿಗುತ್ತಿದೆ.
ಮೊತ್ತ ಮೊದಲ ಬಾರಿಗೆ ಭಾರತದಲ್ಲಿ 2004ರಲ್ಲಿ ಡಾರ್ಜಿಲಿಂಗ್ ಟೀ ಗೆ GI ಟ್ಯಾಗ್ ನೀಡಲಾಗಿತ್ತು, ಪ್ರಸ್ತುತ ಭಾರತದ 325 ಉತ್ಪನ್ನಗಳು GI ಟ್ಯಾಗ್ ಹೊಂದಿವೆ. ಮಹಾಬಲೇಶ್ವರ ಸ್ಟ್ರಾಬೆರಿ, ಜೈಪುರದ ನೀಲಿ ಕುಂಬಾರಿಕೆಗಳು, ತಿರುಪತಿ ಲಡ್ಡು, ಬನಾರಸಿ ಸೀರೆಗಳಿಗೆ GI ಟ್ಯಾಗ್ ಇವೆ.
source; The economic times
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.