ನವದೆಹಲಿ: ಜಿಯೋ ಫೋನ್ನಲ್ಲಿ ವಾಟ್ಸಾಪ್ನ್ನು ಹೇಗೆ ಬಳಸಬೇಕು ಎಂಬ ಬಗ್ಗೆ ವಾಟ್ಸಾಪ್ ಹಾಗೂ ರಿಲಾಯನ್ಸ್ ಜಿಯೋ ಜಂಟಿಯಾಗಿ ಅಭಿಯಾನ ಆರಂಭಿಸಿದೆ.
ಸ್ನೇಹಿತರನ್ನು ಮತ್ತು ಕುಟುಂಬ ಸದಸ್ಯರನ್ನು ಅತ್ಯಂತ ಸರಳ, ಸುರಕ್ಷತಾ ಹಾಗೂ ವಿಶ್ವಾಸಾರ್ಹ ಹಾದಿಯ ಮೂಲಕ ವಾಟ್ಸಾಪ್ನಲ್ಲಿ ಹೇಗೆ ಕನೆಕ್ಟ್ ಆಗಬಹುದು ಎಂಬುದನ್ನು ಜಿಯೋ ಫೋನ್ ಹಾಗೂ ಜಿಯೋ ಫೋನ್ 2 ಬಳಕೆದಾರರಿಗೆ ತಿಳಿಸಿಕೊಡುವ ಸಲುವಾಗಿ ದೇಶವ್ಯಾಪಿಯಾಗಿ ಈ ಅಭಿಯಾನವನ್ನು ನಡೆಸಲಾಗುತ್ತಿದೆ.
ಅ.9ರಿಂದ ಅಭಿಯಾನ ಆರಂಭವಾಗಲಿದ್ದು, ವಾಟ್ಸಾಪ್ ಹಾಗೂ ಜಿಯೋ ಸಂಸ್ಥೆಗಳೆರಡೂ ವ್ಯಾನ್ ಮೂಲಕ ಜಂಟಿಯಾಗಿ ಉತ್ತರಪ್ರದೇಶ, ರಾಜಸ್ಥಾನ ಸೇರಿದಂತೆ ಹಲವಾರು ರಾಜ್ಯಗಳ 10 ನಗರಗಳಿಗೆ ತೆರಳಿ ವಾಟ್ಸಾಪ್ ಬಳಕೆಯ ಬಗ್ಗೆ ಮಾರ್ಗದರ್ಶನ ನೀಡಲಿವೆ.
ಈಗಾಗಲೇ 25 ಮಿಲಿಯನ್ ಜಿಯೋ ಫೋನ್ಗಳು ದೇಶದಲ್ಲಿ ಮಾರಾಟವಾಗಿವೆ, ಇವುಗಳಲ್ಲಿ ವಾಟ್ಸಾಪ್ ಸಪೋರ್ಟ್ ಸಿಸ್ಟಮ್ ಇದೆ. ಭಾರತದ ಡಿಜಿಟಲ್ ಕ್ರಾಂತಿಗೂ ವಾಟ್ಸಾಪ್ ಬಹಳಷ್ಟು ಕೊಡುಗೆಯನ್ನು ನೀಡುತ್ತಿದೆ, ಈ ಹಿನ್ನಲೆಯಲ್ಲಿ ಇವುಗಳ ಬಳಕೆಯ ಅರಿವು ಮೂಡಿಸುವ ಉದ್ದೇಶದೊಂದಿಗೆ ಎರಡೂ ಸಂಸ್ಥೆಗಳೂ ಅಭಿಯಾನ ಆರಂಭಿಸಿವೆ.
source: Timesnownews.com
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.